ಅಮ್ಮ ಬದಲಾಗಿದ್ದಾಳೆ….

ಅಮ್ಮ ಬದಲಾಗಿದ್ದಾಳೆ 
ಹೇಳಿದ್ದಕ್ಕೆಲ್ಲಾ ಸುಮ್ಮನೆ ತಲೆಯಾಡಿಸುತ್ತಾಳೆ..
ಏನಾದರೂ ಕೇಳಲು ಹೋದಾಗ 
'ನಿಮಗೆ ನನಗಿಂತ ಜಾಸ್ತಿ ಗೊತ್ತು '..ಎನ್ನುತ್ತಾಳೆ 

ಅಮ್ಮ ಬದಲಾಗಿದ್ದಾಳೆ...

ಶೀತಕೆಮ್ಮಿಗೆ ಕಷಾಯ ಮಾಡಿ ತಂದವಳು 
ಮೊಮ್ಮಕ್ಕಳು ಗೂಗಲ್ ನಲ್ಲಿ ಏನೋ ಹುಡುಕುವುದ 
ಕಂಡು ಹಾಗೇ ಹಿಂದಿರುಗುತ್ತಾಳೆ 
'ಅಜ್ಜಿ ಕಥೆ' ಯ ಭಂಡಾರ ಅವಳು 
ಮೊಮ್ಮಕ್ಕಳ 'ಸಿನಿಮಾಕಥೆ' ಗೆ ಕಿವಿಯಾಗಿ
ಕಣ್ಣರಳಿಸುತ್ತಾಳೆ..

ಅಮ್ಮ ಬದಲಾಗಿದ್ದಾಳೆ...

ಬಿರಿದ ಹೂವುಗಳನ್ನೆಲ್ಲಾ ಕಿತ್ತು  ಉಡಿಯಲ್ಲಿ ತುಂಬಿ 
ಮಾಲೆ ಕಟ್ಟಿ ನಮ್ಮ ಮುಡಿಗೇರಿಸುತ್ತಿದ್ದವಳು, 
ಈಗ ಗಿಡದಲ್ಲೇ ಅರಳಿ ನಗುವ ಹೂಗಳನ್ನು 
 ಅರ್ತಿಯಿಂದ ಸುಮ್ಮನೆ ನೇವರಿಸುತ್ತಾಳೆ ..

ಅಮ್ಮ ಬದಲಾಗಿದ್ದಾಳೆ...

ನೆರೆಹೊರೆಯವರ ನೋವು ನಲಿವುಗಳಲ್ಲಿ 
ಜೊತೆಯಾಗುತ್ತಿದ್ದ ಅಮ್ಮ 
ಈಗ ಅವರಂತೆಯೇ ಸೀರಿಯಲ್ಲು ಪಾತ್ರಗಳ 
ಕಷ್ಟಗಳಿಗೆ ಮಿಡಿಯುತ್ತಾಳೆ.. 

ಅಮ್ಮ ಬದಲಾಗಿದ್ದಾಳೆ...

ಮನೆಯೆಲ್ಲಾ ಗದ್ದಲವೆಬ್ಬಿಸದೆ,  ಕೋಣೆಯ 
ಮೂಲೆ ಸೇರುವ ಮಕ್ಕಳನ್ನು ಗದರದೇ ಸುಮ್ಮನೇ ಹೋಗಿಬಿಡುತ್ತಾಳೆ .
ಅನಾಥವಾಗಿ ಬಿದ್ದಿರುವ ಬ್ಯಾಟು ಬಾಲುಗಳನ್ನು ಕೋಣೆಯ ಇನ್ನೊಂದು ಮೂಲೆಗೆ ಸರಿಸಿಬಿಡುತ್ತಾಳೆ ..

ಅಮ್ಮ ಬದಲಾಗಿದ್ದಾಳೆ...

ಮಕ್ಕಳು ಮೊಮ್ಮಕ್ಕಳ ವಿಶೇಷ ತಿಂಡಿಗಾಗಿ 
ಅಡುಗೆಮನೆಯಲ್ಲೇ ವ್ಯಸ್ತವಾಗುತ್ತಿದ್ದ ಅಮ್ಮ 
ಈಗ ಸ್ವಿಗಿ,  ಝೋಮಾಟೋದಿಂದ ಬರುವ
ತಿನಸಿಗಾಗಿ  ಕಾಯುವ ಮಕ್ಕಳನ್ನೇ ನೋಡುತ್ತಾ 
ಸುಮ್ಮನೆ ಕುಳಿತುಬಿಡುತ್ತಾಳೆ. 

ಅಮ್ಮ ಬದಲಾಗಿದ್ದಾಳೆ..

***

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

12 thoughts on “ಅಮ್ಮ ಬದಲಾಗಿದ್ದಾಳೆ….”

  1. ಕೌಡೂರು ನಾರಾಯಣ ಶೆಟ್ಟಿ, ಇಟೆಲಿ

    ಅಮ್ಮ ಬದಲಾಗಿದ್ದಾಳೆ…ಹೂಂ ಕಾಲ ಬದಲಾಗಿದೆ ಎಂದು ಗೊಣಗುವವರೆ ಎಲ್ಲಾ. ಹಾಗಾಗಿ ಅಮ್ಮನೇ ಬದಲಾದಳು

  2. Yestondu Satya , nija jeevanadalli modalina Amma badalagiddale makkaligaagi , thumba manassige mutti ,ghasi golisuva kavana , all the best Savi , barevonduppule , yennanchina yirena followers sadaa support malpuver , good luck 💐

  3. ಶಶಿಕಲಾ ಹೆಗಡೆ

    ಕಾಲಾಯ ತಸ್ಮೈನಮಃ
    ಅಮ್ಮನೂ ಅದಕ್ಕೆ ಹೊರತಾಗಿಲ್ಲ.
    ಚಂದದ ಮನಮುಟ್ಟುವ ಕವನ ಸವಿತಾ, ಅಭಿನಂದನೆಗಳು

  4. ತುಂಬಾ ಚೆನ್ನಾಗಿ ಮೂಡಿಬಂದಿದೆ ಕವನ…ಈಗಿನ ಜೀವನ ಶೈಲಿ ಆಮ್ಮನನ್ನು ಬದಲಾಯಿಸಿದೆ.

  5. ಕಾಲಾಯ ತಸ್ಮೈ ನಮಃ|🙏
    ಹುಟ್ಟಿನಿಂದ ನಡುವಯಸ್ಕನಾಗುವವರೇಗೆ ನಾ ಕಂಡ ಬದಲಾಗದ ಆಗಿನ ಅಮ್ಮ ಈಗ Accept the changes and life will be smoother of not better ಎಂದು ಅರಿತು ಸೋತು ಘರ್ಷಣೆಗಳನ್ನು ತಪ್ಪಿಸಲು ಬದಲಾಗಿದ್ದಳೆ

  6. ದಿನಕರ+ನಂದಿ+ಚಂದನ್

    ಕಾಲದ ಪ್ರಭಾವ ಜೀವನದಲ್ಲಿ ಬದಲಾವಣೆ ತಂದಿದೆ. ಅಭಿನಂದನೆಗಳು 💐💐

  7. Wow! ಅಮ್ಮ ಬದಲಾಗಿದ್ದಾಳೆ ಅನ್ನುವ ವಾಸ್ತವವನ್ನು ಎಷ್ಟು ಚೆನ್ನಾಗಿ ಬಿಂಬಿಸಿದ್ದೀರಿ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter