ಬೇಲಿಯ ಗೂಟದಲ್ಲೊಂದು ಚಿಟ್ಟೆ

ಬೇಲಿಗೆ ಹಾಕಿದ್ದ ಗೂಟದಲ್ಲಿ
ನೆಗೆದ ಹಾಗಿದೆ ಚಿಗುರು
ಬೇಲಿಯ ಕ್ರೌರ್ಯವನ್ನೆಲ್ಲ ಮೀರಿ
ನಿಲ್ಲಬಲ್ಲೆ ಎಂಬಂತೆ ತಾನು

ಕೋಮಲ ಸುಕೋಮಲವಾಗಿದೆ ಅದು
ಎಷ್ಟೆಂದರೆ ಲೆಕ್ಕ ಸಿಗದಷ್ಟು
ಈಗ ತಾನೆ ಹುಟ್ಟಿದ ಮಗುವಿನ ಕಿರುಬೆರಳು
ಅಥವಾ ಹೆಂಗಳೆಯರ ಹೂ ಮುಡಿಯ ಹೂವು

ಹೋಗ ಬೇಕಾಯಿತು ನಾನಲ್ಲಿಗೆ
ಬೇಲಿಯಾಚೆ ಬಿದ್ದಿರ ಬಹುದೆ ಅಡಿಕೆ
ಅಥವಾ ತೆಂಗಿನಕಾಯಿ ಎಂದು
ಎಂದಿನ ಹಾಗೆ ಆ ಸಂಜೆ

ನೋಡಿದರೆ ಅಡಿಕೆಯ ಮೇಲೊಂದು ಚಿಟ್ಟೆ
ಏನೋ ಧ್ಯಾನಿಸಿ ಕುಳಿತಂತೆ
ಮುಟ್ಟಲು ಹೊರಟೆ ನಿದ್ದೆಯ ಮಗುವನ್ನು 
ಎಚ್ಚರಿಸಲು ಮುಟ್ಟುವಂತೆ ಕೆನ್ನೆ

ನಾನು ಮುಟ್ಟಿದ್ದೇ ಎದ್ದು ಹಾರಿತು ಚಿಟ್ಟೆ
ಗಾಳಿಗೆ ಬಂದ ಹಾಗೆ ರೆಕ್ಕೆ
ಅದರ ಜೊತೆ ಆ ಚಿಗುರೂ ಹಾರಿದಂತೆ
ಆಗಿ, ಆಗಿತ್ತೇ ಅದೂ ಚಿಟ್ಟೆ ?


  ಡಾ.ನಾ.ಮೊಗಸಾಲೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಬೇಲಿಯ ಗೂಟದಲ್ಲೊಂದು ಚಿಟ್ಟೆ”

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter