ಕಡಲಿನಿಂದ ಎದ್ದು ಬೀಸುವ ಗಾಳಿಗೆ ಎಲ್ಲೆಲ್ಲೂ ತಂಪು ಮಡುಗಟ್ಟಿದ ಮೋಡಕ್ಕೆ ಸೋಕಿ ಅಲ್ಲೊಮ್ಮೆ ಇಲ್ಲೊಮ್ಮೆ ಹನಿಸಿ ತನ್ನಷ್ಟಕ್ಕೆ ತಾನು ಹಾಯುತ್ತಲೇ ಇದೆ ಆ ಪರ್ವತ ಈ ಗುಡ್ಡ ಮರ ಮಟ್ಟು ಎಲ್ಲವನೂ ಮುಟ್ಟುತ್ತ ನಿಲ್ಲದೆಯೆ ಕ್ರಮಿಸುವುದೇ ಕ್ರಮ ಬಾನೆತ್ತರಕೆ ಬೆಳೆದು ನಿಂತು ತಡೆಯಾದರೂ ಗೊಡವೆಯಿಲ್ಲದ ದಾರಿ ಹಣ್ಣೆಲೆ ಕಾಯೆಲೆ ಚಿಗುರೆಲೆಗಳ ಪಟ ಪಟ ಬಿದ್ದ ಎಲೆಗಳು ಎದ್ದು ನಿಂತಿವೆ ರೆಕ್ಕೆ ಬೀಸಿದಷ್ಟೂ ಸಂಭ್ರಮ ಆ ಹಕ್ಕಿಗೆ ಜಡವಾದ ಗೂಡಿನಲಿ ಜೋಕಾಲಿ ಆ ಕ್ಷಣ ಅಲ್ಲೊಂದು ನೀರವ ಏಕಾಂತದ ಕಿವಿಯಲೂದಿ ಎಚ್ಚರಿಸುವ ಕಲೆ ಹೆಚ್ಚು ಕಡಿಮೆ ತೂಕ ಲೆಕ್ಕ ಎಲ್ಲವೂ ಲೋಕದ ವ್ಯವಹಾರಗಳು ಬಿಟ್ಟು ಬಿಡಿ ಗಾಳಿ ಬಂದಾಗ ತೂರಿಕೊಂಡು ಜೊತೆ ಜೊತೆಗೇ ಸಾಗಲಿ ಗುಟ್ಟಿಲ್ಲದ ಗುರಿಯೊಂದಿಗೆ ಅಲ್ಲೊಂದು ಗುಡಿಯ ಹಂಗಿಲ್ಲದ ಗಾಳಿ ಗೋಪುರ ಆಗ ಕವಿತೆಯ ಕಿಟಕಿ ತೆರೆದಂತೇ

7 thoughts on “ಗಾಳಿ ಗೋಪುರ”
ತಡೆಯೇನು, ಅಳುಕಿಲ್ಲದ ನಡೆಗೆ? ಸಾಗಲಿ.
ಸುಂದರ ಭಾವಲಹರಿ.
ಧನ್ಯವಾದಗಳು
ಧನ್ಯವಾದಗಳು ವಿಶ್ವಧ್ವನಿ…
ಸೊಗಸಾದ ಕವಿತೆ ಕಲಾ..ಅಭಿನಂದನೆಗಳು
ಧನ್ಯವಾದಗಳು ಮೇಡಂ
ಭಾವಪೂರ್ಣವಾದ ಕವಿತೆ. ರೆಕ್ಕೆ ಬಿಚ್ಚಿ ಹಾರಲು ಬಯಸುವ ಮನಗಳಿಗೆ ಶುಭಹಾರೈಕೆಗಳು ಬಗ್ಗೆ
ಗೋವಿಂದ ಭಟ್ ಅವರಿಗೆ ಧನ್ಯವಾದಗಳು