(ಚಿತ್ರಕವನ)
ನೆಲದಲ್ಲಿ ಅರಳಿವೆ ಬೆಳಕಿನ ಮೊಗ್ಗು ಒಂದೊಂದಕ್ಕೆ ಒಂದೊಂದು ಮೆರುಗು ಕೈತುಂಬಾ ಬಳೆಗಳಲಿ ಸಿಂಗರಿಸಿ ಹೆಣ್ಣು ಹಿಡಿದಿದ್ದಾಳೆ ಹಣತೆ ಉರಿಸಿ! ಮೆಟ್ಟಿ ಕಲಸಿದ ಮಣ್ಣು ಹುಳಿಹುಳಿ/ ಹಣತೆ ಮಾಡಿದ ಕುಂಬಾರ ಧಾರಾಳಿ/ ಹತ್ತಿಯನು ಕೈಯಲ್ಲಿ ಹೊಸೆದ ಬತ್ತಿ/ ಬೆಳಗಿದೆ ಹಣತೆಯೊಳಗೆ ಜ್ಯೋತಿ!/ ದೀಪಾವಳಿ ಹಬ್ಬದಲಿ ಬೆಳಕಿನದೇ ವಿಶೇಷ/ ಕತ್ತಲೆಯನು ಓಡಿಸುವುದು ಬಿಡದೆ ಶೇಷ/ ಬೆಳಗಬೇಕು ದೀಪ ಸಾಲು-ಸಾಲು/ ಧೈರ್ಯ ತುಂಬಬೇಕು ಎದುರಿಸಲು ಸವಾಲು!/ ಬೆಳಕು ಒಂದು ವಿಶೇಷ ಸವಲತ್ತು/ ಹಣತೆ ಬೆಳಗುವುದು ಕ್ಷಮತೆ ಅರಿತು/ ಶಿರ ಬಾಗಬೇಕು ಹಣತೆ ಹಿಡಿದ ಕೈಗಳನು ಎಲ್ಲ ಮನೆಗಳ ಬೆಳಗುವವಳನ್ನು!/
3 thoughts on “*ಹಣತೆ ಹಿಡಿದ ಕೈಗಳು*”
ಸುಂದರ ಹಣತೆ ಕವಿತೆ
ಹಣತೆ ಅರ್ಥವತ್ತಾಗಿ ಬೆಳಕ ಚೆಲ್ಲಿದೆ. ಅಭಿನಂದನೆಗಳು 💐💐
Sarala sugama chitrageete hanateya belake chanda…