ಮಗಳಿಗೆ ಎರಡು ಕವಿತೆಗಳು

1.ಅಡುಗೆ ಮನೆಯಲಿ ಸ್ವಲ್ಪ ಜೋಪಾನ ಮಗಳೇ 

ಹಾಲು ಉಕ್ಕ ಬಹುದು 
ಬೆಂಕಿಯುರಿ ಕಮ್ಮಿ ಮಾಡು
ಮೊಬೈಲ್ ನೋಡುತ್ತಿ, ಚಾಟ್ ಮಾಡುತ್ತಿ, ನಿನ್ನೊಳಗೇ ಹಾಡುತ್ತಿ 

ಹಾಲು ಉಕ್ಕ ಬಹುದು 

ಏನೋ ಯೋಚಿಸುತ್ತಿ, ತರಕಾರಿ ಕೊಚ್ಚುತ್ತಿ ,
ಮೆಟ್ಟುಗತ್ತಿಯಲ್ಲಿ ಕಾಯಿ ಕೆರೆಯುತ್ತಿ 
ಟಿಫಿನ್ ಬಾಕ್ಸ್ ತುಂಬುತ್ತಿ 

ಇಲ್ಲಿ ಹಾಲು ಉಕ್ಕಬಹುದು 

ಕಸದಗಾಡಿಗೆ ಕಸಹಿಡಿದು ಓಡುತ್ತಿ 
ಅರೆಕ್ಷಣ ಪೇಪರ್ ನೋಡುತ್ತಿ 

ಅಂಗಳ ಗುಡಿಸುತ್ತಿ 
ರಂಗೋಲಿ ಹಾಕುತ್ತಿ 

ಅಲ್ಲೆಲ್ಲಿಯೋ ಇರಲು ನೀನು 
ಈ ಹಾಲು ಇಲ್ಲಿ 
ಉಕ್ಕದೇನು?

ಉಪಾಯ ಇಷ್ಟೇ ನೋಡು 
ಬೆಂಕಿಯುರಿ ಹದಾ  ಮಾಡು

ಎಲ್ಲಿ ಹೋದರೂ 'ಒಂದು ನಿಗಾ' ಇರಲಿ ಮಗಳೇ 

ಹಾಲು ಉಕ್ಕಬಹುದು 
                                           


2. ಚಾತಟ್ಟೆ ಕೆಳಗೆ ಬೀಳಬಹುದು 

ಅಂಚಿನಲ್ಲಿಟ್ಟಿರುವಿ 
ಮಾತಲಿ ಮೈಮರೆತಿರುವಿ 
ಚಾತಟ್ಟೆ ಕೆಳಗೆ 
ಬೀಳಬಹುದು 

ನೆಲ ಗಲೀಜಾಗಿ 
ಒರೆಸಲು ಬಾಗಿ 
ಬೀಳಬಹುದು ಫೋನು 
ಅಥವಾ ನೀನು  

ಕಾಲುಳುಕಿ ನೀನು ಕುಂಟ ಬಹುದು 
ಒರೆಸಿದರೂ ನೆಲ ಅಲ್ಲಿ ಅಂಟ ಬಹುದು 

ಮಗಳೆ, ಹೇಳುವೆ ನಾನು ಮತ್ತೆ ಮತ್ತೆ 
ಸರಿ ಇರಿಸಿಕೋ ನಿನ್ನ ಚಹಾ ತಟ್ಟೆ 
                                 
--------

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

10 thoughts on “ಮಗಳಿಗೆ ಎರಡು ಕವಿತೆಗಳು”

  1. Dr Madhavi S Bhandary

    ಮಗಳಿಗೆ ಕೊಡುವ ಸೈರಣೆಯ ಮಾತುಗಳು ನಮಗೂ ಮಾರ್ಗದರ್ಶಕ. ಎಳಸು ತುಂಬಿದ ಭಾವ ಎದೆಯಲ್ಲಿ ತುಂಬಿಬಿಡುತ್ತದೆ.

    1. ಎಂ.ವಿ.ಮುರಳೀಧರನ್

      ಅನುಭವದ ಜೋಳಿಗೇಯಿಂದ ಮಗಳಿಗೆ ಹೇಳುವ ಹಿತನುಡಿ ಅರ್ಥಗರ್ಭೀತ

  2. valpadi vasantha kumar

    ಬಹಳ ಚೆನ್ನಾಗಿದೆ ಎರಡು ಕವನಗಳು.ಮಗಳಿಗಷ್ಟೆ ಅಲ್ಲ ಎಲ್ಲರಿಗೂ ಅನ್ವಯ.
    _

    1. ಬಾಲಚಂದ್ರ ದಾಮ್ಲೆ

      ಮನದ ಅಡುಗೆಮನೆಯಲ್ಲೂ ಒಂದು ನಿಗಾ, ಒಂದು ಹದಾ ಇರಲಿ ಸದಾ

  3. ಎರಡೂ‌ಕವನಗಳು ಆಪ್ತವಾಗಿ ಸೊಗಸಾಗಿವೆ.ಅಭಿನಂದನೆಗಳು💐🙏

  4. ಮಾ. ಸೀ.ಗುರುಪ್ರಸಾದ್

    ಪ್ರಿಯ ಚಿಂತಾಮಣಿ ಕೊಡ್ಲೇಕೆರೆಯವರಿಗೆ,
    ಮೊದಲ ಕವಿತೆ ಮಗಳಿಗೆ ಎಚ್ಚರಿಕೆಯ ಬುದ್ದಿವಾದ ದಂತೆ ಇರುವ , ಅವಳ ಕಾರ್ಯಭಾರದ ಅಭಿನಂದನೆ.
    ಎರಡನೇ ಕವಿತೆ ಅವಳಿಗೆ ಬುದ್ದಿವಾದ.
    ಎರಡು ತುಂಬಾ ಚೆನ್ನಾಗಿ ಮೂಡಿ ಬಂದಿದೆ. ತುಂಬು ಅಭಿನಂದನೆಗಳು. ನಿಮ್ಮ ಕಾವ್ಯ ಲಹರಿ ಸತತವಾಗಿ ಹರಿಯಲಿ.

  5. D N Puttahanumantharayappa

    ನನ್ನೆರಡು ಮಕ್ಕಳಿಗೆ ತಂದೆಯಾಗಿ ನಾನೇ ಹೇಳುತ್ತಿರುವಂತೆ ಭಾವ ತುಂಬಿ ಬಂತು.
    ನವಿರಾದ ಸಾಹಿತ್ಯ ತಲೆ ನೇವರಿಸಿದಂತಿದೆ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter