ಋತು ಹೊರಳಬೇಕು ಬದುಕು ಕವಿತೆಯಾಗುವುದಕ್ಕೆ ಹದವಾಗಿ ಬಿದ್ದ ಮಳೆಗೆ ಮಣ್ಣು ಮೊಳೆತು ಚಿಗುರು ಮೊಗ್ಗು ಹೂ ಹಣ್ಣು ಸೊಗಯಿಸಲು ಋತು ಹೊರಳಬೇಕು ಕೊರೆವ ಚಳಿಯಲಿ ಗೂಡು ಸುತ್ತಿಕೊಂಡು ಮೆಲುಕಾಡಿ ಬೆತ್ತಲಾಗಿ ಪೊರೆಕಿತ್ತೆಸೆದು ಸುಂದರಚಿಟ್ಟೆಯಾಗಿ ಹಾರಲು ಋತು ಹೊರಳಬೇಕು ಮಣ್ಣು ನೀರು ಕಲೆತು ತಿಗರಿಯಲಿ ಸುತ್ತಿ ಬಿರುಬಿಸಿಲಿಗೆ ಬೆಂದು ಗಡಿಗೆಯಾಗಿಖಣಖಣಿಸಲು ಋತು ಹೊರಳ ಬೇಕು ಬದುಕು ಸುರಿದ ಎಣ್ಣೆಯಲಿ ನೀರಿನಲಿ ಎದೆಯ ಪಂಜು ಏರಿಳಿದು ಕಿರುದೀಪ ಸ್ಥಿರವಾಗಲು ಋತು ಹೊರಳಬೇಕು ಬಿದಿರಲಿ ಹೊಕ್ಕ ಗಾಳಿ ಕವಿತೆಯಾಗಲು ನಾನು ಉಸಿರಾಗಬೇಕು *
ಕವಿತೆ ಮತ್ತು ಋತು
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ
ಫೇಸ್‌ಬುಕ್ ಲಾಗಿನ್ ಬಳಸಿ ಕಮೆಂಟ್ ಮಾಡಿ
ಶ್ವೇತಾ ನರಗುಂದ
ಪರಿಚಯ:
ಶ್ವೇತಾ ನರಗುಂದ ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರಪದವೀಧರೆ. ಲಿಬಿಯಾ ದೇಶದ ಬೆಂಗಾಝಿ ಶಹರದಲ್ಲಿ ಶಿಕ್ಷಕಿಯಾಗಿ, ನಂತರ ಆಸ್ಪತ್ರೆ ನಿರ್ವಾಹಕಿಯಾಗಿ ಇಪ್ಪತ್ತು ವರ್ಷ ಸೇವೆ ಸಲ್ಲಿಸಿ, ಈಗ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. 4 ಕವನ ಸಂಕಲನ, 3 ಕಥಾ ಸಂಕಲನ, 2 ಪ್ರವಾಸ ಕಥನ, 1 ಕಾದಂಬರಿ, 1 ವ್ಯಕ್ತಿ ಚಿತ್ರ, 1 ವೈದ್ಯಕೀಯಮಾಹಿತಿಯ ಹೀಗೆ ಒಟ್ಟು 12 ಕೃತಿಗಳು ಪ್ರಕಟವಾಗಿವೆ. ‘ಮನಮದ್ದಳೆಯ ಸ್ವಗತ’ ಕವನ ಸಂಕಲನ ಅಚ್ಚಿನಲ್ಲಿದೆ. ‘ಕಾವ್ಯಕುಂದಣ’ಇವರ ಸಂಪಾದಿತ ಕವನ ಸಂಕಲನ. ಕಥೆ ಲೇಖನ ಕವನಗಳು ಪ್ರತಿಷ್ಠಿತ ನಿಯತಕಾಲಿಕಗಳಲ್ಲಿ ಪ್ರಕಟವಾಗುತ್ತಿದ್ದು,ಅನೇಕ ಪ್ರಶಸ್ತಿ ಪುರಸ್ಕಾರಗಳಿಂದ ಗೌರವಿಸಲ್ಪಟ್ಟಿದ್ದಾರೆ. ಸಂಗೀತ, ಚಿತ್ರಕಲೆ ಮತ್ತಿತರ ಲಲಿತಕಲೆಗಳು ಇವರ ಆಸಕ್ತಿಯ ಕ್ಷೇತ್ರಗಳು.
All Posts
5 thoughts on “ಕವಿತೆ ಮತ್ತು ಋತು”
ಕೊನೆಯ ತಿರುವು ಚೆನ್ನಾಗಿದೆ.
ಧನ್ಯವಾದಗಳು
ಕವಿತೆ ಯೋಚನೆಗೆ ಹೆಚ್ಚಿತು.
ತುಂಬಾ ಗಂಭೀರವಾದ ಕಾವ್ಯ
Very nice
ಬಹಳ ಸೊಗಸಾಗಿದೆ….