ಎತ್ತ ಸಾಗುತಿರುವೆವು ನಾವು? ಎದುರಿಗಿದ್ದರೂ ಕಾಣದಂತೆ, ಪಕ್ಕದಲ್ಲಿದ್ದರೂ ಅರಿಯದಂತೆ, ಒಂದೇ ಊರಲ್ಲಿದ್ದರೂ ಅಜ್ಞಾತವಾಗಿ. ಮರೆತು ಹೋದವೇ ಆ ದಿನಗಳು? ನಕ್ಕು, ಕುಣಿದು ಕುಪ್ಪಳಿಸಿದ ಕ್ಷಣಗಳು, ಅತ್ತು ಕರೆದು, ಸಂತೈಸಿದ ಘಟನೆಗಳು. ಆಧುನಿಕತೆಯ ಆಡಂಬರದಲಿ, ವೈಜ್ಞಾನಿಕತೆಯ ಅನುಕರಣೆಯಲಿ, ಸಂಬಂಧಗಳ ಕೊಂಡಿ ಕಳಚಿ ಎಲ್ಲಿ ಹೋದವು ನಮ್ಮಲ್ಲಿಯ ಆದರಗಳು, ಪ್ರೀತಿ ಸನ್ಮಾನಗಳು. ಅವಲೋಕಿಸ ಬೇಕಾಗಿದೆ, ನಮ್ಮನ್ನು ನಾವು ಇಂದು. ಯಾರಿಗೆ ಗೊತ್ತು? ಯಾರ ಪಯಣ ಎಲ್ಲಿ ಕೊನೆ ಎಂದು? - ಚಂದ್ರಸತಿ