ಗಾಂಧಿ, ನಮ್ಮ ನಡುವೆ

ಕೈಗೆ ಸಿಕ್ಕದ ಬಣ್ಣ ಹೂವಿನಲ್ಲಿ
ಹೂವೇ ಆಗಿರುವ ಹಾಗೆ
ಇವರು ನಿಂತಿದ್ದಾರೆ ಪ್ರತಿಮೆಯಾಗಿ
ಇಲ್ಲವೇ ಭಾವದಲ್ಲಿ

ಅಥವಾ

ಮುಟ್ಟಲು ತಟ್ಟಲು ಹೋದರೆ ಚಿಟ್ಟೆ
ಸಿಕ್ಕಿದರೂ ಕೈಗೆ, ಒಳಗೊಳ್ಳದೆ ಒಳಗೆ
ಅದರಲ್ಲೇ ಅದು ಇದ್ದರೆ ಹೇಗೆ, ಇಲ್ಲವೇ
ಗಿಡದಲ್ಲಿ ಅದೇ ಹೂವಾಗಿ ಇರುವ ಹಾಗೆ

ಅಥವಾ

ಓದಿದ್ದು ಅರಗಿಸಿಕೊಳ್ಳಲು ಇಲ್ಲವೇ ಪ್ರಯತ್ನಿಸಿದ್ದು
ಮರಳಿ ಪುಸ್ತಕವನ್ನೇ ಸೇರಿದ ಹಾಗೆ
ಗಾಂಧಿ ಅಂದರೆ ಒಂದು ಪಾಠ, ಪಾಸಾಗಲು ಪರೀಕ್ಷೆ
ಇಲ್ಲವೇ ಉದ್ಯೋಗಕ್ಕೆ ರಹದಾರಿ ಎನುವಂತೆ

ಅಥವಾ

ತಲ್ಲಣ ನಿರೀಕ್ಷೆ ನಿರಾಶೆ ವಿಷಾದ ಆದರ್ಶಗಳೆಲ್ಲ
ಕರಗಿದಾಗ ಕರಗದೆ ಆಗಿ ಗಾಂಧಿ
ಅದೇ ಊರುಗೋಲು ಅದೇ ಕನ್ನಡಕ ಅದೇ ಹೆಜ್ಜೆ
ಮೆಲ್ಲನೆ ಉರಿಯುತ್ತಿರುತ್ತದೆ ದೇವರ ನಂದಾದೀಪದಲ್ಲಿ

ಅಥವಾ

– ಡಾ. ನಾ. ಮೊಗಸಾಲೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

4 thoughts on “ಗಾಂಧಿ, ನಮ್ಮ ನಡುವೆ”

  1. nagarekha gaonkar

    ಗಾಂಧಿ ನಿಂತಿದ್ದಾರೆ ನಮ್ಮ ನಡುವೆ

    ಅಥವಾ..
    ಚಿಂತನೆಗೆ ಹಚ್ಚುವ ಕವನ

  2. ಧರ್ಮಾನಂದ ಶಿರ್ವ

    ಗಾಂಧೀಜಿಯನ್ನು ಚಿರಂತನ ಸತ್ಯದ ನಿಲುವಿನಲ್ಲಿ ಅಜರಾಮರವಾಗಿ ಕಂಡರಿಸಿದ ಕವನ.
    ಬಳಸಿದ ಉಪಮೆಗಳು‌ ಗಾಂಧಿಯ ಕುರಿತು ಸದಾ ಕಾಡುವಂತೆ ಮಾಡುತ್ತವೆ.
    ನಾ. ಮೊಗಸಾಲೆಯವರಿಗೆ ಅಭಿನಂದನೆಗಳು.

  3. ಸುಬ್ರಾಯ ಮತ್ತೀಹಳ್ಳಿ.

    ಗಾಂಧಿಯ ಹೊಚ್ಚ ಹೊಸ ಪ್ರತಿಮೆ. ಚಿಂತನೆಗೆ ಹಚ್ಚಿದ ಹಿರಿಮೆ. ಅಭಿನಂದನೆಗಳು ಸರ್.‌

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter