ಮುಂಬಯಿಯ ‘ಮೊಗವೀರ’ ಮಾಸ ಪತ್ರಿಕೆಯ ಕಥಾ ಸ್ಪರ್ಧೆ-೨೦೨೧

ಮುಂಬಯಿ: ‘ಮೊಗವೀರ’ವು ತನ್ನ 82ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಸುಸಂದರ್ಭಕ್ಕಾಗಿ ಅಖಿಲ ಭಾರತ ಮಟ್ಟದಲ್ಲಿ ಕನ್ನಡ ಸಣ್ಣ ಕಥಾ ಸ್ಪರ್ಧೆ ಆಯೋಜಿಸಿದೆ. ಕನ್ನಡ ಬರಹಗಾರರನ್ನು ಪ್ರೋತ್ಸಾಹಿಸುವ ಸದುದ್ದೇಶದಿಂದ ನಡೆಯುವ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಕಥೆಗಾರರಿಗೆ ಪ್ರವೇಶ ಶುಲ್ಕವಿಲ್ಲ.
ಪ್ರಥಮ, ದ್ವಿತೀಯ, ತೃತೀಯ ಎಂದು ಆಯ್ಕೆಯಾದ ಉತ್ತಮ ಕಥೆಗಳಿಗೆ ಮೂರು ನಗದು ಬಹುಮಾನಗಳಿದ್ದು, ಪ್ರಥಮ ರೂ.7000/, ದ್ವಿತೀಯ ರೂ.5000/- ತೃತೀಯ ರೂ.3000/- ನೀಡಲಾಗುವುದು ಎಂದು ಪತ್ರಿಕೆಯ ಸಂಪಾದಕರಾದ ಅಶೋಕ್ ಸುವರ್ಣ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ
ನಿಯಮಗಳು :
1. ಕಥೆ ಸ್ವಂತ ರಚನೆಯಾಗಿರಬೇಕು. ಅನುವಾದಿತ ಕಥೆಗಳಿಗೆ ಅವಕಾಶವಿಲ್ಲ. ಒಬ್ಬರು ಒಂದೇ ಅಪ್ರಕಟಿತ ಕಥೆ ಕಳುಹಿಸಬೇಕು.
2. ಸ್ಪಷ್ಟವಾದ ಕೈಬರಹ, ಬೆರಳಚ್ಚು, ಕಂಪ್ಯೂಟರ್ ಮುದ್ರಿತ ಪ್ರತಿಗಳನ್ನು ಕಳುಹಿಸಬಹುದು. ಇ-ಮೇಲ್ ಮೂಲಕ ‘ನುಡಿ’   ತಂತ್ರಾಂಶದಲ್ಲಿ ಕಂಪೋಸ್ ಮಾಡಿರುವ ಫೈಲ್ ಗಳನ್ನು ಕಳುಹಿಸಬಹುದು.
3. ಹಸ್ತಪ್ರತಿ, ಮುದ್ರಿತ ಪ್ರತಿ, ಸಾಫ್ಟ್ ಕಾಪಿ ಜೊತೆಗೆ ಪ್ರತ್ಯೇಕ ಕಾಗದದಲ್ಲಿ ವಿಳಾಸ, ಮೊಬೈಲ್ ನಂಬ್ರ ಬರೆದು ಫೋಟೋ ಅಂಟಿಸಿ ಕೃತಿಯೊಡನೆ ಲಗತ್ತೀಕರಿಸಬೇಕು. ಕಥೆ ಪುಟಗಳಲ್ಲಿ ಲೇಖಕರ ಹೆಸರು ಇರಬಾರದು.
4. 14 ಪಾಯಿಂಟ್ ಫಾಂಟ್ ಸೈಜಿನ ಮುದ್ರಿತ ಪ್ರತಿಯಲ್ಲಿ ಕನಿಷ್ಠ 8 ಪುಟಗಳಷ್ಟು ಹಾಗೂ ಗರಿಷ್ಠ 12 ಪುಟಗಳಷ್ಟು ಮೀರದಂತಿರಲಿ. ಮಿನಿಕಥೆಗಳು ಬೇಡ.
5. ವಿಜೇತರಿಗೆ ಚೆಕ್ ಮೂಲಕ ಬಹುಮಾನ ಮತ್ತು ಪ್ರಮಾಣ ಪತ್ರ ಕಳುಹಿಸಲಾಗುವುದು.
6. ಬಹುಮಾನ ಗಳಿಸಿದ ಹಾಗೂ ಮೆಚ್ಚುಗೆ ಪಡೆದ ಕೃತಿಗಳನ್ನು ‘ಮೊಗವೀರ’ದ ಮುಂದಿನ ಸಂಚಿಕೆಗಳಲ್ಲಿ ಪ್ರಕಟಿಸಲಾಗುವುದು. ಪ್ರಕಟಿತ ಕೃತಿಗಳಿಗೆ ಮೊಗವೀರ ನಿಗದಿ ಪಡಿಸಿದ ಗೌರವ ಧನವನ್ನು ಕಳುಹಿಸಲಾಗುವುದು.
7. ಕೃತಿಗಳ ಪ್ರತಿಗಳನ್ನು ಹಿಂದೆ ಕಳುಹಿಸಲಾಗುವುದಿಲ್ಲ.
8. ತೀರ್ಪುಗಾರರ ನಿರ್ಣಯವೇ ಅಂತಿಮ, ಯಾವುದೇ ಪತ್ರ ವ್ಯವಹಾರಕ್ಕೆ ಅವಕಾಶವಿಲ್ಲ.
ಬರಹಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ : 30-10-2021
ಕೃತಿಗಳನ್ನು ಕಳುಹಿಸಬೇಕಾದ ವಿಳಾಸ :

The Editor,
‘Mogaveera’ Kannada Monthly Magazine,
Mogaveera Bhavan,
MVM Educational Campus Marg
Off Veera Desai Road, Andheri West,
Mumbai – 400058

E-mail : [email protected]

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter