ಗಣಪತಿ ಕಥೆ

ಜಯ ಜಯ ಹೇ ವಿಘ್ನವಿನಾಯಕ         
ಜಯಜಯ ಹೇ ಗಣಪತಿಯೆ(೨)
ಜಯಜಯ ಹೇ ಗಣಗಳ ನಾಥ
ಜಯಜಯ ಹೇ ಸುಕುಮಾರ(೨)

ಲಂಬೋದರನೆ ಏಕದಂತ
ಪಾರ್ವತೀ ಸುತನೇ ವಿನಾಯಕ (೨)
ಮೂಷಕವಾಹನ ಮೋದಕ ಹಸ್ತ
ಗೌರೀತನಯ ಗಜಾನನ(೨)

ಸಿದ್ಧಿ ಬುದ್ಧಿಯ ಜಯಿಸಿದ ದೇವ
ಜ್ಞಾನ ವಿಜ್ಞಾನದ ಆಕರ ದೇವ (೨)
ಬುದ್ಧಿಯ ಬೆಳೆಸಿ ಸಿದ್ಧಿಯ ತಂದು
ಕಾಯೌ ನಮ್ಮನು ಕರುಣಾಕರನೆ(೨)

ಸಕಲ ಕಾರ್ಯಕೆ ಆದಿಯು ನೀನೆ
ಸಕಲ ವಿಘ್ನವ ಹರಿಸುವ ದೇವ(೨)
ಸಕಲ ಕಾರ್ಯಕೆ ಸಿದ್ಧಿಯ ನೀಡಿ
ಸಕಲ ಲೋಕವ ರಕ್ಷಿಸು ದೇವ(೨)

ಅಂದು ಚಂದ್ರನ ಅಟ್ಟಹಾಸಕೆ
ತುಂಬುಕೋಪದಿ ಶಾಪವನಿತ್ತೆ
ತಿಂಗಳ ಬೆಳಕಿನ ಇಂದುದೇವನ
ಗರ್ವವ ನೀನು ಅಡಗಿಸಿದೆ

ಕ್ಷಣದಲಿ ಚಂದ್ರನು ಮೊರೆ್ಯಿಡಲಂದು
ಕರುಣಾಕರ ನೀ ಸಲಹಿದೆಯೋ
ಶುದ್ಧ ಚೌತಿಯೊಳು ನಿನ್ನ ಭಜಿಪರನು
ಕರುಣದಿ ಕಾಯೋ ಇಭಮುಖನೆ

ಅಮ್ಮನಾಜ್ಞೆಯ ಪಾಲಿಸಲೆಂದು
ಅಪ್ಪನ ತಡೆದೆ ನೀನಂದು
ಈಶನ ಕೋಪಕೆ ಬೆಚ್ಚಬೆದರದೆ
ಎದುರಿಸಿ ನಿಂತೆ ಮಹೇಶನ

ಕೋಪದಿ ಈಶನು ತಲೆಯನು ತೆಗೆಯಲು
ಅಮ್ಮನ ಒಲುಮೆಯು ಬದುಕಿಸಿತು
ಆನೆಯ ಮುಖವ ಹೊಂದಿದೆ ನೀನು
ಗಣಪತಿಯೆಂದೇ ಇಳೆಯೊಳಗುಳಿದೆ

ಅಂದು ರಾವಣ ಲಿಂಗವನೊಯ್ದ
ನಿನ್ನ ಭಜಿಸಲು ತಾ ಮರೆತ
ಸಿದ್ಧಿಯ ನೀಡದೆ ವಿಘ್ನವ ತಂದೆ
ಜಗದೊಳು ನಿನ್ನ ಶಕ್ತಿಯ ಮೆರೆದೆ

ವಿಘ್ನಾಂತಕ ನೀ ವಿಘ್ನ ವಿದೂರಕ
ವಿಘ್ನವಿನಾಶಕ ವಿನಾಯಕ
ವಿಘ್ನವ ಹರಿಸಿ ನಿರ್ವಿಘ್ನವ ತೋರುತ
ವಿಘ್ನಭಗ್ನವ ಮಾಡು ವಿಘ್ನೇಶ

ನಿನ್ನ ನುತಿಸುವ ನಾಲಗೆಗೀಗ
ಸರಾಗ ಕರುಣಿಸು ವಿಘ್ನೇಶ
ನಿನ್ನ ಗುಣಗಳ ಗಾಯನ ಮಾಡುವ
ಸಿದ್ಧಿಯ ನೀಡು ಗಜಾನನ 

ಮಂಗಳವು ನಿನಗೆ ವಿಶ್ವೇಶ್ವರ) ಪುತ್ರನಿಗೆ
ಮಂಗಳವು ನಿನಗೆ ಸಕಲ ಕಾರ್ಯ ಸಾಧಕಗೆ
ಮಂಗಳವು ನಿನಗೆ ಕುಮಾರನಗ್ರಜಗೆ
ಮಂಗಳವು ನಿನಗೆ ಮಾತೆ  ಅಂಬಿಕಾತನಯನಿಗೆ

ಡಾ ಸತ್ಯವತಿ ಮೂರ್ತಿ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ಗಣಪತಿ ಕಥೆ”

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter