ಇಳಿಗಣ್ಣು

ಇಳಿಗಣ್ಣು

ಸೆಖೆಗೆ ಸುಳಿಯದು ಗಾಳಿಯೆಂದು
ಹೊರಗೆ ಬಂದು
ಹೂದೋಟದ ನಡುವೆ ಹೋಗಿ ಕುಳಿತೆ
ಇದಿರು ಧ್ಯಾನಸ್ಥ ಚಿಟ್ಟೆ

ನೋಡಿದೆ: ಸುಮ್ಮನಿದ್ದಂತಿದೆ ಅದು
ಹೂವಾಗಿದೆಯೋ ಎಂಬಂತೆ!
ಅಥವಾ ಹೂವೇ ಚಿಟ್ಟೆಯಾಗಿ
ಬರುತ್ತಿದೆಯೇ ನನ್ನ ಈ ಇಳಿಗಣ್ಣಿಗೆ ?

ತಡೆದು ಬಳಿ ಸಾರಿ ಮುಟ್ಟಿದೆ ಮೆಲ್ಲ
ಚಲನೆ ಇರಲಿಲ್ಲ ಅದರಲ್ಲಿ
ಜೀವ ಇದೆಯೆ ನೋಡೋಣವೆಂದು
ಎತ್ತಿ ಇಟ್ಟೆ ಅಂಗೈಗೆ

ಎಷ್ಟು ಬಣ್ಣ ! ಅಹಹಾ ! ಎಂಬಂಥ ರೇಖೆ
ಅದರಿಂದಲೇ ಆಗಿದೆಯೇ ಅದು ಚಿಟ್ಟೆ ?
ಕಣ್ಣು ಕಣ್ಣಾಗುವುದೂ ಹೀಗಲ್ಲವೇ ಎಂದು
ಹೇಳಿ ಹೋಯಿತೇ ಅದು ನನಗೆ ಹೀಗೆ !

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

3 thoughts on “ಇಳಿಗಣ್ಣು”

  1. ಶ್ವೇತಾ ನರಗುಂದ

    ಧ್ಯಾನಸ್ಥ ಕಣ್ಣಿನ ಒಳನೋಟ. ಸುಂದರ ಕವಿತೆ

  2. ಅರುಣಕುಮಾರ ಎಸ್. ಆರ್

    ಅರ್ಥಪೂರ್ಣ ಕವಿತೆ. ಇಳಿವಯಸ್ಸಿನ ನಿಶ್ಚಲತೆ, ಗಾಂಭೀರ್ಯತೆಯ ಸೊಬಗನ್ನು ಚಿಟ್ಟೆಯಲಿ ಕೆತ್ತಿರುವ ಪರಿಯನ್ನೊದುವುದೇ ಖುಶಿ. – ಡಾ. ಅರುಣಕುಮಾರ ಎಸ್.ಆರ್.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter