ಕಲೆ: ಕಾರ್ತಿಕ್ ವೇಂಕಿ
ಉದ್ಭವಿಸಲಿಲ್ಲ ನೆಲದಿಂದ ಜಲದಿಂದ
ಉದುರಲಿಲ್ಲ ಬಾನಿಂದ ಮುಗಿಲಿಂದ
ಮಿಂದೆದ್ದು ಸುರಿದುಂಡು
ಅದನೆಗುಂಡಿಗೆಯಲಿ ಬುತ್ತಿಕಟ್ಟಿಕೊಂಡು
ಹೊಲೆ ಎಂಬರೆ?
ಸ್ಖಲನದ ಕಲೆ ಹೊತ್ತ ಲಂಗೋಟಿ
ಅಪ್ಪುವಅಯ್ಯಪ್ಪನ ಹೊಸ್ತಿಲು
ಮುಖ ಮುರಿವುದೇ ಕೆಂಪ ಕಂಡು?
ಶಿಶ್ನಕಂಟದ ಮೈಲಿಗೆ
ಯೋನಿ ಹೊತ್ತ ಮೈಗೇಕೆ?
ದೇವರುಕಲ್ಲಾದರೇನಂತೆ
ಹೇಸಬಹುದೇತನದೇ ಸೃಷ್ಟಿಗೆ?
ಬೆವರು ಹೂಸು ಉಚ್ಚೆ ಹೇಲೆಂಬ
ಹೊಲೆ ಕಕ್ಕಿ ಮೆರೆವಕಾಯಕೆ
ಗರ್ಭಗುಡಿಯಿಂದೊಸರುವ
ತಪ್ತರುಧಿರದ ಮೈಲಿಗೆಯೆ?
ಶರತ್ಕಾಲದಲಿ ಕಳಚಿ ಬರಿದಾದ ಮರಕೆ
ಮೈಲಿಗೆಯನಾರೋಪಿಸಿ,
ವಸಂತದಲಿ ಚಿಗಿತು ಬರುವ
ಹಣ್ಣರಸವ ಸೀಪಿ ಸೀಪಿ ಉಂಬರೆ?
ಸುಡಲಿ ನಿನ್ನ ಸಂವಿಧಾನ
ಕೊಡುವುದಿಲ್ಲ ನಾ ಸುತರಾಂ
ಕಾಚದ ಪ್ರಮಾಣ
12 thoughts on “ಕಾಚ ಪ್ರಮಾಣ”
ಹೊಲಸೆಂಬುದು ಮನದ ಬಿಂಬ
ಹೊಲಸೆಂಬುದು ಹೊಲಸ ಪ್ರತಿಬಿಂಬ.
ನಿಜ
ವಾಚ್ಯವಾಯಿತೆ?
ಅಭಿಪ್ರಾಯ ಕ್ಕೆ ಧನ್ಯವಾದಗಳು
ಮೊದಲ ಪ್ಯಾರವೇ ಅದ್ಭುತ. ಸೊಗಸಾದ ಕವಿತೆ. ಅಭಿನಂದನೆಗಳು ಕವಿಯತ್ರಿಗೆ.
ತಮ್ಮ ಮೆಚ್ಚುಗೆ ಗೆ ಧನ್ಯವಾದಗಳು
ವಾವ್! ಲೌಕಿಕದೊಳು ಅಲೌಕಿಕವನು ಧ್ವನಿಸುವ ಕಾವ್ಯ…ಅಭಿನಂದನೆ…
ಧನ್ಯವಾದಗಳು
ಗಟ್ಟಿ ಗುಂಡಿಗೆಯ ದಿಟ್ಟ ಕವನ ಸೂಪರ್ ಆಗಿದೆ
ಧನ್ಯವಾದಗಳು
“ಶರತ್ಕಾಲದಲಿ ಕಳಚಿ ಬರಿದಾದ ಮರಕೆ
ಮೈಲಿಗೆಯನಾರೋಪಿಸಿ,
ವಸಂತದಲಿ ಚಿಗಿತು ಬರುವ
ಹಣ್ಣರಸವ ಸೀಪಿ ಸೀಪಿ ಉಂಬರೆ? ”
ವಚನ ಸಾಹಿತ್ಯದ ಅದ್ಭುತ ಛಾಪು ಇದೆ. ಕವನ ಬಹಳ ಚೆನ್ನಾಗಿದೆ. !!
ಧನ್ಯವಾದಗಳು