ಡಾ. ಲಕ್ಷ್ಮೀ ಪ್ರಸಾದ್ ಅವರ “ಕರಾವಳಿಯ ಸಾವಿರದೊಂದು ದೈವಗಳು”

ಡಾ. ಲಕ್ಷ್ಮೀ ಪ್ರಸಾದ್ (ಲಕ್ಷ್ಮೀ ವಾರಣಾಸಿ) ಅವರು ಕಾಸರಗೋಡು ಜಿಲ್ಲೆಯ ಕೋಳ್ಯೂರು ಗ್ರಾಮದ ವಾರಣಾಸಿ ಮೂಲದವರು. ತಂದೆ ವೇದಮೂರ್ತಿ ನಾರಾಯಣ ಭಟ್ಟರು  ವಿದ್ವಾಂಸರೆಂದು ಪ್ರಸಿದ್ಧರು. ತನ್ನ ಮನೆತನವು ವೈದಿಕಾಚರಣೆಯನ್ನೇ ಹೊಂದಿದ್ದರೂ, ಕುಟುಂಬದಲ್ಲಿ ದೈವದ ಆರಾಧನೆಯನ್ನು ಮಾಡುತ್ತಿರುವುದೇಕೆ ಎಂಬ ಕುತೂಹಲವೇ ಡಾ. ಲಕ್ಷ್ಮೀ ಪ್ರಸಾದ್ ಅವರಿಗೆ ಪ್ರೇರಣೆಯಾಗಿ ಅವರು ಈ ಕುರಿತಾದ ಸಂಶೋಧನೆಗೆ ಇಳಿದರು. 

ಇದರಿಂದ ಕರಾವಳಿ ಕರ್ನಾಟಕದ ಅಂದರೆ ಅವಿಭಜಿತ ದ.ಕ.ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ ಮತ್ತು ಕೊಡಗನ್ನೂ ಒಳಗೊಂಡಂತೆ ದೈವರಾಧನೆಯ ಆಶಯ ಆಕೃತಿಯನ್ನು ನಿರಂತರ ಸಂಶೋಧಿಸಲು ಅವರು ಮುಂದಾದರು. ಈ ನಿರಂತರತೆ ಇಪ್ಪತ್ತೊಂದು  ವರುಷಗಳ ಕಾಲ ನಡೆದುದರ ಪರಿಣಾಮವಾಗಿ ಈ ಮೇಲಿನ ಪ್ರದೇಶಗಳಲ್ಲಿ ಒಟ್ಟು ಎರಡು ಸಾವಿರದ ನೂರ ಐವತ್ತನಾಲ್ಕು  ದೈವಗಳು ಆರಾಧಿಸಲ್ಪಡುತ್ತವೆ ಎನ್ನುವ ಸತ್ಯ ಗೋಚರಿಸಿತು.

ಹಿರಿಯ ಜಾನಪದ ತಜ್ಞರೂ ವಿದ್ವಾಂಸರೂ ಆಗಿರುವ ಪ್ರೊ| ಬಿ.ಎ.ವಿವೇಕ ರೈ ಅವರು ತಮ್ಮ ಮಹಾಪ್ರಬಂಧದಲ್ಲಿ (1985) ಇನ್ನೂರ ಹದಿನೇಳು ದೈವಗಳನ್ನು ಗುರುತಿಸಿದ್ದರೆ,  ಇನ್ನೋರ್ವ ಜಾನಪದ ವಿದ್ವಾಂಸ ಪ್ರೊ| ಚಿನ್ನಪ್ಪಗೌಡರು ತಮ್ಮ ಮಹಾಪ್ರಬಂಧದಲ್ಲಿ (1990) ಮುನ್ನೂರು ದೈವಗಳ ಅಸ್ತಿತ್ವವನ್ನು ಕಂಡರಿಸಿದ್ದಾರೆ.. ಮುಂದೆ ರಘುನಾಥ ವರ್ಕಾಡಿಯವರು ತಮ್ಮ ‘ಕಂಡಂಬಾರು ಮಲರಾಯ’ ಕೃತಿಯಲ್ಲಿ (2014) ನಾಲ್ಕು ನೂರ ಏಳು ದೈವಗಳನ್ನು ಉಲ್ಲೇಖಿಸಿದರು. 

ಆಮೇಲೆ ಈ ಬಗ್ಗೆ ಸಂಶೋಧನೆ ನಡೆದದ್ದು ಕಡಿಮೆ ಅಥವಾ ಈ ಅರಿವಿನಲ್ಲೆ ಗಿರಕಿ ಹೊಡೆದದ್ದೇ ಹೆಚ್ಚು. ಆದರೆ ಡಾ. ಲಕ್ಷ್ಮಿ ಪ್ರಸಾದ್ ಅವರ ಆಸಕ್ತಿ ಅಥವಾ ಜಿಜ್ಞಾಸೆಯು ತಾವು ರಚಿಸಿದ ಮಹಾಪ್ರಬಂಧದ ಹೊತ್ತಿಗೆ (2007) ಸಾವಿರದ ನಾಲ್ಕು ನೂರ ಮೂವತ್ತೈದು ದೈವಗಳ ಕ್ಷೇತ್ರ ಕಾರ್ಯದ ತನಕ ಹಬ್ಬಿತು. ಇದೀಗ ಅವರು ಎರಡು ಸಾವಿರದ ನೂರ ಐವತ್ತನಾಲ್ಕು  ದೈವಗಳನ್ನು ಸಾಕ್ಷಿ ಸಮೇತ ಗುರುತಿಸಿ ನಾಡು ಬೆರಗಾಗುವಂತೆ ಮಾಡಿದ್ದಾರೆ.

ತುಳು ಸಂಸ್ಕೃತಿಯ ಪ್ರಧಾನ ಅಂಗವಾಗಿ ದೈವಾರಾಧನೆ ಇದೆ. ಅದು ಇಲ್ಲದ ತುಳು ಸಂಸ್ಕೃತಿಯೇ ಇಲ್ಲ ಎನ್ನುವುದು ಅದರ ಪಾರಮ್ಯ. ನಂಬಿಕೆಯ ಆಧಾರದ ಮೇಲೆ ನಿಂತಿರುವ ಈ ಆರಾಧಾನ ಪದ್ಧತಿಯು ಶತಮಾನಗಳ ಪರಂಪರೆಯುಳ್ಳದ್ದು. ಇಂಥ ಸಂಸ್ಕೃತಿಯ ಬೇರುಗಳ ಆಳಕ್ಕೆ ಇಳಿದು ಚಿನ್ನವನ್ನು ಅಗೆದು ತೆಗೆದು ಪುಟಕ್ಕಿಡುವ ಹಾಗೆ ಮಾಡುವ ಕೆಲಸವು ಸಂಕೀರ್ಣವೂ, ಸಂಕಷ್ಟದ್ದೂ ಹೌದು, ಹಾಗೆಯೇ ಪುರುಷರಿಗಷ್ಟೇ ಸೀಮಿತ ಎನ್ನುವಂತಿದ್ದ ಈ ಸಂಶೋಧನೆಯನ್ನು  ಮಹಿಳೆಯರು ಮಾಡಬಹುದೆನ್ನುವಂತೆ ಡಾ.ಲಕ್ಷ್ಮೀ ಪ್ರಸಾದರು ಮಾಡಿ ತೋರಿಸಿದ್ದಾರೆ. 

ಇದಕ್ಕೆ ಅವರು ಹುಟ್ಟಿದ ಗಂಡು ಮೆಟ್ಟಿನ ನೆಲದ ಪ್ರಭಾವ ಎಷ್ಟು ಕಾರಣವೋ ಅಷ್ಟೇ ಅವರ ಗಂಡೆದೆಯೂ ಕೂಡಾ!  ಡಾ. ಲಕ್ಷ್ಮೀ ಪ್ರಸಾದ್ ಅವರು ಕನ್ನಡ,ಹಿಂದಿ ಮತ್ತು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವೀಧರರು. ಒಂದು  ಎಂ.ಫಿಲ್ ಪದವಿ  ಹಾಗೂ ಎರಡು ಪಿ.ಹೆಚ್.ಡಿಯ ಗರಿಯೂ ಅವರ ಸಾಧನೆಗೆ ದಕ್ಕಿದೆ. ಸಂಸ್ಕೃತ ಎಂ.ಎಯಲ್ಲಿ ಪ್ರಥಮ ರರ‌್ಯಾಂಕ್ ಪಡೆದಿರುವ ಅವರು ಕನ್ನಡ ಎಂ.ಎ.ಯಲ್ಲಿ ನಾಲ್ಕನೇ ರ‌್ಯಾಂಕಿಗೂ ಭಾಜನರಾಗಿದ್ದಾರೆ. 

ಬದುಕನ್ನು ಅಧ್ಯಯನ ,ಅಧ್ಯಾಪನ ಮತ್ತು ಸಂಶೋಧನೆಗಳಿಗೆ  ಮೀಸಲಿಟ್ಟಿರುವ ಅವರ ಈ ಇಪ್ಪತ್ತಮೂರನೆಯ   ಕೃತಿ ಅವರ ಮಹಾತ್ವಾಕಾಂಕ್ಷೆಯ ಶಿಖರ.

ಸರಕಾರದ ಆಶ್ರಯವಿಲ್ಲದೆ, ಅಕಾಡಮಿಗಳ ಪ್ರೋತ್ಸಾಹವಿಲ್ಲದೆಯೇ  ತನಗೆ ತಾನೇ ಸ್ವಯಂ ಭೂವಾಗಿ ನಡೆಸಿದ ಈ ಕ್ಷೇತ್ರ ಕಾರ್ಯ ಅಪರೂಪದಲ್ಲಿ ಅಪರೂಪದ್ದು.

 ಭೂತ ಕಟ್ಟುವ ಜನಾಂಗದವರಿಂದ ಮತ್ತು ಇನ್ನಿತರ ಸಂಸ್ಕೃತಿ ಚಿಂತಕರ ಮೂಲದ ಐತಿಹ್ಯಗಳಿಂದ ಸಂಗ್ರಹಿಸಲ್ಪಟ್ಟ ಅವರ ಸಂಶೋಧನೆಯಲ್ಲಿ ಆಯ್ದ ಸಾವಿರದ ಇನ್ನೂರ ಏಳು  ದೈವಗಳ ಮಾಹಿತಿಗಳನ್ನು ಈ ಗ್ರಂಥದಲ್ಲಿ ಅವರು ಅನಾವರಣಗೊಳಿಸಿದ್ದಾರೆ. 

ಇದು ತುಳು ಸಂಸ್ಕೃತಿಯ ಹೊನ್ನ ಕಿರೀಟಕ್ಕೆ ಇಟ್ಟ ನವಿಲಗರಿ.

ಇದು ‘ಪಿಂತಿಲ್ಲ ಮುಂತಿಲ್ಲ’ ಎನ್ನುವ ಜಾನಪದ ಸಂಶೋಧನೆಯ ಆಚಾರ್ಯಕೃತಿಯಾಗಿದ್ದು ‘ಅಯ್ಯಯ್ಯ ಎಂಚ ಪೊರ್ಲಾಂಡ್‍ಂದ್ ತುಳುವರು ಮೈಯುಬ್ಬಿ ಹೇಳಬೇಕಣ್ಣ’ ಎನ್ನುವುದನ್ನು ಈ ಕಾಲದಲ್ಲಿ ಅನುರಣಿಸಲು ಕಾರಣವಾಗಿರುವ ವಿಸ್ಮಯ.

******

ಕರಾವಳಿಯ ಸಾವಿರದೊಂದು ದೈವಗಳು ಅನುಕ್ರಮಣಿಕೆ  ಪ್ರಸ್ತಾವನೆ :
  1 ಅಕ್ಕಚ್ಚು 2- ಅಕ್ಕ ಬೋಳಾರಿಗೆ 3-4ಅಕ್ಕೆರ್ಲು- ಅಂಬೆರ್ಲು 5 ಅಗ್ನಿ ಕೊರತಿ 6-9  ಅಗ್ನಿ ಭೈರವನ್ ಮತ್ತು ಪರಿವಾರ  10-11 ಅಚ್ಚು ಮತ್ತು ಮೆಚ್ಚು ಬಂಗೇತಿಯರು 12-14  ಅಜ್ಜಮ್ಮ ದೇವರು ಮತ್ತು ಪರಿವಾರ  15-16 ಅಜ್ಜ ಬಳಯ  ಮತ್ತು ಮಾಮಿ ಕುಲೆ 17-23  ಅಜ್ಜಿ ಭೂತ , ಕೂಜಿಲು ಮತ್ತು ಇತರ ದೈವಗಳು 24 ಅಜ್ಜಿ ಬೆರೆಂತೊಲು 25-26  ಅಜ್ಜೆರ್ ಭಟ್ರು ಮತ್ತು ಅಜ್ಜೆರ್ ಪರಿವಾರ 27 ಅಡ್ಯಲಾಯ 28 ಅಡ್ಯಂತಾಯ 29 ಅಡಿ ಮಣಿತ್ತಾಯ 30-31   ಅಣ್ಣ ತಮ್ಮ ದೈವಗಳು/ಅತ್ತಾವರದ ದೈವಗಳು 32-33   ಅಣ್ಣೋಡಿ ಕುಮಾರ- ಕಿನ್ಯಂಬು 34   ಗುಟ್ಟು ಬಿಟ್ಟು ಕೊಡದ ಅಬ್ಬೆ ಜಲಾಯ 35-36  ಅರಬ್ಬಿ ಭೂತ  ಮತ್ತು ಬ್ರಾಂದಿ ( ಬ್ರಾಹ್ಮಣತಿ‌) 37 -40  ಅರಸು ಬಂಗಾಡಿತ್ತಾಯ ಮತ್ತು ಸೇರಿಗೆ ದೈವಗಳು 41 ಅಸುರಾಳನ್/ ಅಸುಳಾನುಂ ಮಕ್ಕಳು 42-43  ಅಂಗಕ್ಕಾರನ್ ಮತ್ತು  ಮರುಟೋಳನ್ 44  ಅಂಗಾರ ಬಾಕುಡ 45 ಅಂಮಣ ಬನ್ನಾಯ 46-47  ಅಂಕೆ- ಉಮ್ಮಯ 48 ಆಚಾರಿ ಭೂತ 49  ಆಟಕಾರ್ತಿ 50   ಆಟಿ ಕಳೆಂಜ 51-53  ಆದಿ ವೇಡನ್ ಮತ್ತು ಪರಿವಾರ. 54 ಇಡಲದಜ್ಜಿ   55  ಇಷ್ಟಜಾವದೆ  56 ಉಗ್ಗೆದಲ್ತಾಯ  57- 60 ಉಮ್ಮಲ್ತಿ ,ಉಮ್ಮಲಾಯ,ಬೆಮ್ಮಲ್ತಿ ಬೆಮ್ಮಲಾಯ  61 ಉಪ್ರಝಾಸ್ಸಿ  62 ಉಚ್ಚಬಲಿ ತೆಯ್ಯಂ 63-64 ಉರವ ಎರುಬಂಟ 65-88 ಉಳ್ಳಾಕುಲು   ಮತ್ತು ಉಳ್ಳಾಲ್ತಿ ದೈವಗಳು 89-90 ಎರು ಶೆಟ್ಟಿ( ಮಲೆ ಮುದ್ದ) 91-92  ಎಂಬ್ರಾನ್ ದೇವ- ಐಪ್ಪಳ್ಳಿ 93-99 ಏಲುವೆರ್ ಸಿರಿಕುಲು 100 ಒಕ್ಕು ಬಲ್ಲಾಳ 101-102 ಒರು ಬಾಣಿಯೆತ್ತಿ ,ನೆಲ್ಲೂರಾಯ   103- 105 ಓಣಂ ದೈವಗಳು 106 ಓಟೆಚರಾಯ 107: ಕಟ್ಟು ಎಡ್ತುನ್ ಕುಟ್ಟಿ ‌108 ಕಟ್ಟದಲ್ತಾಯ ‌109-110 ಕಡವಿನ ಕುಂಞ ಮತ್ತು ಕಳವಿನ ಚಿಕ್ಕ 111-112 ಕಡಂಬಳಿತ್ತಾಯ/,ಕೊಡಂಬಿಲ್ತಾಯ ಮತ್ತು ಮಲ್ಯೋಡಿತ್ತಾಯ  113 -114 ಕನಪಾಡಿತ್ತಾಯ, ಮಗ್ರಂದಾಯ ಮತ್ತು ಪಂಬದ  115 ಕನ್ನಡ ಕಲ್ಕುಡ 116   ಕನ್ನಡ ಬೀರ 117  ಕನ್ನಡ ಭೂತ 118-119 ಕನ್ನಲಾಯ ಮತ್ತು ಸ್ವಾಮಿ ನಂದೆದಿ 120 ಕನಿಯತಿ 121 ಕಪ್ಪಣ ಸ್ವಾಮಿ  122 ಕರಣಿಕ / ಕಾರ್ಯಸ್ಥನ್ ತೆಯ್ಯಂ  123-124 ಕರಿಯಣ್ಣ ನಾಯಕ, ಕೋಟಿ ನಾಯಕ 125 ಕರಿಯ ಮಲ್ಲಯ್ಯ  126-133 ಕರಿಂತಿರಿ ನಾಯರ್ ,ಪುಲಿಯೂರ್ ಕಾಳಿ ಮತ್ತು ಪುಲಿ ದೈವಗಳು  134 -135 ಕರ್ನಗೆ ಮತ್ತು ಮಲಾರ್ ಜುಮಾದಿ 136-137  ಕಲಿಯಾಟ ಅಜ್ಜಪ್ಪ, ಕಾಟಾಳ ಬೊಳ್ತು 138-139 ಅಲಿಖಿತ ಇತಿಹಾಸ ಸಾರುವ ಕಲ್ಕುಡ ಕಲ್ಲುರ್ಟಿ ದೈವಗಳು  140  ಕಂಡನಾರ ಕೇಳನ್ 141  ಕಂರ್ಭಿ ಬೈದ್ಯೆದಿ 142  ಕಾಜಿಗಾರ್ತಿ 143-153  ಕಾಡ್ಯನಾಟದ ದೈವಗಳು  154- 155  ಕಾಡೆದಿ  ಮತ್ತು ಕಾಡ್ತಿಯಮ್ನ 156-157 ಅತಿಕಾರೆ ಬೆಳೆಯನ್ನು ತಂದ ಕಾನದ ಕಟದರು 158-160 ಕಾನಲ್ತಾಯ ಮತ್ತು ಪರಿವಾರ ದೈವಗಳು 161-162 ಕಾಯರ್ತಾಯ ಮಾದ್ರಿತ್ತಾಯ 163-167 ಕಾರಿ ಕಬಿಲ ದೈವಗಳು  168 ಕಾಳರಾತ್ರಿ  169-172 ಕಾಳರಾಹು,ಕಳರ್ಕಾಯಿ ,ಕುಮಾರ ಸ್ವಾಮಿ‌ ಕನ್ಯಾಕುಮಾರಿ  173-178  ಕಾಂತಾ ಬಾರೆ ,ಬೂದಾ ಬಾರೆ , ಅಚು ಬೈದ್ಯೆತಿ ,ಪುಲ್ಲ ಪೆರ್ಗಡ್ತಿ ,ಉಳ್ಳಾಯ ,ಸಾರಮಾನ್ಯ ದೈವಗಳು   179 ಕಾಂತು ನೆಕ್ರಿ ಭೂತ 180  ಕಿನ್ನಿದಾರು 181 ಕೀಳು ದೈವ 182-183 ಮದುಮಕ್ಕಳ ರೂಪದಲ್ಲಿ ಕಂಗೊಳಿಸುವ ಕುಕ್ಕೆತ್ತಿ ಬಳ್ಳು ದೈವಗಳು  184-185 ಕುಜುಂಬ ಕಾಂಜವ ಮತ್ತು ಕಾಚು ಕುಜುಂಬ  ದೈವಗಳು 186-187  ಕುಟ್ಟಿಚ್ಚಾತ್ತನ್  ಮತ್ತು ಪಮ್ಮಚ್ಚು 188  ಕುಡಿ ವೀರನ್  189  ಕುದುರೆತ್ತಾಯ / ಕುದುರೆ ಮುಖ ದೈವ ‌ 190-191  ಕುರವ ಮತ್ತು ಸತ್ಯಂಗಳದ ಕೊರತಿ 192  ಕುರುವಾಯಿ ದೈವ ‌193- 199   ಕುಲೆ ಭೂತಗಳು – ತುಳುನಾಡಿನ ವಿಶಿಷ್ಟ ದೈವಗಳು ‌200 ಕುಂಞಮ್ಮ ಆಚಾರ್ದಿ ‌201   ಕುಂಞಾಳ್ವ ಬಂಟ ‌202   ಕುಂಞಿ ಭೂತ ‌203 ಕುಂಞಿ ರಾಮ ಕುರಿಕ್ಕಳ್ 204 -208  ಕುಂಜಿರಾಯ ದೈವಗಳು 209-210 ಕುಂಜಿ ಮತ್ತು ಅಂಗಾರ ದೈವಗಳು 211  ಕುಂಜೂರಂಗಾರ ‌212 ಕುಂಟಲ್ದಾಯ ‌213-214  ಕುಂಟುಕಾನ  ಮತ್ತು ಕೊರವ ದೈವಗಳು ‌215-216 ಕುಂಡ – ಮಲ್ಲು ದೈವಗಳು  217  ಕುಂಡೋದರ 218–221  ಕೆಂಚಣ್ಣ ಕರಿಯಣ್ಣ ಪಾಪಣ್ಣ ಮತ್ತು ಲಕ್ಷ್ಮೀ ನರಸಿಂಹ 222-223  ಕೇಚ ರಾವುತ ಮತ್ತು ರೇವಂತ  ‌224  ಕೇತುರ್ಲಾಯ  225  ಕೊಟ್ಟೆದಲ್ತಾಯ 226-228  ಕೊಡಮಣಿತ್ತಾಯ,ವೈದ್ಯನಾಥ ,ಕುಡುಮದಾಯ ಮತ್ತು ಕುಕ್ಕಿನಂತಾಯ ದೈವಗಳು 239 ಕೊನ್ನೊಟ್ಟು ಕಡ್ತ ‌230-231   ತುಳುನಾಡಿನ ಜನಾನುರಾಗಿ ದೈವ ಕೊರಗ ತನಿಯ  ಮತ್ತು  ಮೈರೆ ಕೊರತಿ  ‌232  ಕೊರತಿ  ‌233  ಕೊಲ್ಲಿ ಕುಮಾರ ಮತ್ತು ಕೊಲ್ಯತ್ತಾಯ 234-235  ಕೊಂಡಾಣದ ಬಂಟ ಮತ್ತು ತಂಕರು ಮೂಲ್ಯೆದಿ 236: ಅಪ್ರತಿಮ ವೀರ ಕೋಚು ಮಲ್ಲಿ  237-239  ತುಳುನಾಡು ಬೆಳಗಿದ ಅವಳಿ ವೀರರು : ಕೋಟಿ ಚೆನ್ನಯರು ಮತ್ತು ದೇಯಿ ಬೈದ್ಯೆತಿ  ‌240-241  ಅಪ್ರತಿಮ ಸಾಹಸಿ ಕೋಟೆದ ಬಬ್ಬು ಮತ್ತು ಕಚ್ಚೂರ ಮಾಲ್ದಿ ‌242:  ಕೋಟ್ರ ಗುತ್ತಿನ ಬಬ್ಬು  ‌243-244  ಕೋಟೆರಾಯ ಮತ್ತು ಕೋಟೇಶ್ವರ ದೈವಗಳು 245   ಕೋರಚ್ಚನ್  ‌246   ಕೋಲು ಭಂಡಾರಿ 247    ಕೋಳೆಯಾರ ಮಾಮ 248  ಗಣಪತಿ ಕೋಲ 249  ಗಂಗೆ ನಾಡಿ ಕುಮಾರ ,( ಓಡಿಲ್ತಾಯ) 250-251  ಗಂಡ ಗಣಗಳು ಮತ್ತು ಡೆಂಜಿ ಪುಕ್ಕೆ  252  ಗಂಧರ್ವ ದೈವಗಳು 253    ಗಿಳಿರಾಮ 254   ಗಿಳಿರಾವಂತ 255-256  ಗಿರಾವು ಮತ್ತು ಕೊಡೆಕಲ್ಲಾಯ 257  ಗುರು ಕಾರ್ನವೆರ್  258  ಗುರುನಾಥನ್  259-275 ಗುಳಿಗ ಮತ್ತು ಸೇರಿಗೆ  ದೈವಗಳು  276-300  ಚಾಮುಂಡಿ ಮತ್ತು ಸೇರಿಗೆ ದೈವಗಳು  301-302 ಚಾವುಂಡೇಶ್ವರ ಮತ್ತು ಚಂಡಿಕೇಶ್ವರ  303 -313   ಚಿಕ್ಕು/ ಚಿಕ್ಕಮ್ಮ  ಪರಿವಾರ ದೈವಗಳು  314-318′ ಐವರು  ಚಿನಿಕಾರ/ಚೀನೀ ಭೂತಗಳು 319 ಚೆನ್ನಿಗರಾಯ 320-322′ ಚೆಮ್ಮರತಿಮತ್ತು ಪಡೆವೀರನ್ ದೈವಗಳು 323  ಜಟಾಧಾರಿ  324  -334  ಜಟ್ಟಿಗ  ದೈವಗಳು (ಜೈನ ಜಟ್ಟಿಗ ಕೋಟೆ ಜಟ್ಟಿಗ ನೆತ್ರಾಣಿ ಜಟ್ಟಿಗ ಹೊಗೆವಡ್ಡಿ ಜಟ್ಟಿಗ ಅರಮನೆ ಜಟ್ಟಿಗ ಇತ್ಯಾದಿ)  335-337 ಜಮೆಯ- ಜಮಯತಿ ,ಬಡೆದಿ ದೈವಗಳು 338  ಜಂಗ ಬಂಟ 339 ಜಾನು ನಾಯ್ಕ    340  ಜಾರಂದಾಯ 341-342  ಜಾಲ ಬೈಕಾಡ್ತಿ/ ಜಾಲ ಕೊರತಿ ಮತ್ರು ಅಂಗಾಡಿ ಕೊರತಿ ದೈವಗಳು  343   ಪನ್ನೆ ಬೀಡಿನ ಜಾಲ್ಸೂರಾಯ 344-345  ಇರ್ವೆರ್ ಜೋಕುಲು ದೈವೊಲು 346 ಜೈನ ಗುಜ್ಜಾರ್ಲು 347  ಜೈನ ಭೂತ  348  ತಪ್ಪೇದಿ/ ತಪ್ಪೆದಿ  349 ತನ್ನಿಮಾಣಿಗ   350-352  ತಂತ್ರಿಗಣಗಳು 353 ತಿಮ್ಮಣ್ಣ ನಾಯಕ 354 -356ತೆಕ್ಕನ್ ಕರಿಯಾತನ್, ಕನ್ನಿಕ್ಕೊರುಮಗನ್ ಮತ್ತು ಕೈಕೋಲನ್ ತೆಯ್ಯಂ 357 ತೋಡ ಕುಕ್ಕಿನಾರ್  358  ದಾರಮ್ಮ ಬಳ್ಳಾಲ್ತಿ  359-362  ದಾರು ಕುಂದಯ ದೈವಗಳು  363   ದೀಪದ ಮಾಣಿ 364-365   ದುಗ್ಗಲಾಯ ಮತ್ತು ಸುತ್ತು ಕೋಟೆ ಚಾಮುಂಡಿ  366   ದೂಮ 367  ದೂಧುರ್ಮ / ದೂರ್ದುಮ  368-369  ದೆಸಿಲು ಮತ್ತು ಕಿಲಮರತ್ತಾಯ ದೈವಗಳುಬ 370 ದೇಬೆ ದೈವ  371-372   ದೇರೆ ಮತ್ತು  ಮಾನಿ ದೈವಗಳು 373 ದೇವಾನು ಪಂಬೆದಿಯಮ್ಮ 374 ದೇಯಿ ಬೈದೆತಿ 375-376 ದೇಸಿಂಗ ಉಳ್ಳಾಕುಲು ಮತ್ತು ,ಕೋಟೆದಾರ್  377–380; ದೈವ ಸಾದಿಗೆ ಒಲಿಪ್ರಾಂಡಿ , ,ದೈವನ ಮುಟ್ನಾಯೆ ,ಅಡ್ಯೊಲ್ತಾಯೆ 381   ದೈವಂತಿ 382-396 ಧೂಮಾವತಿ ಮತ್ತು ಸೇರಿಗೆ ದೈವಗಳು  397 -400 ನಂದಿ ಹೆಸರಿನ ದೈವಗಳು  401-404  ನರಿ ತೆಯ್ಯಂ,ನರಿ ಪೂದ ಮತ್ತು ಸೇರಿಗೆ ದೈವಗಳು  405-406  ನಂದಿಗೆನ್ನಾಯ ಮತ್ತು ಬ್ರಾಣ ಭೂತ 407-409  ನಾಗ ಕನ್ನಿಕೆ  ಮತ್ತು ನಾಗರಾಜರು  410   ನಾಗ ಬ್ರಹ್ಮ  411 ನಾಗ ಭೂತ  412-418    ನಾಗ ಬ್ರಹ್ಮ ಮಂಡಲದ ದೈವಗಳು 419-420 ನಾರಳ್ತಾಯ ಮತ್ತು ಭೂತರಾಜ  421  ನಾಲ್ಕೈತಾಯ 422-423  ನೀಚ ತನಿಯ ಮತ್ತು ಒಂಟಿ ಕಾಲಿನ ಬಬ್ಬರ್ಯ  424-425 ನುರ್ಗಿ‌ಮದಿಮಾಲ್ ಮತ್ತು ದುರ್ಗಿ ಮದಿಮಾಲ್  426   ನೇರಳತ್ತಾಯ 427-428   ನೈದಾಲ ಪಾಂಡಿ  ಮತ್ತು ಮಹೇಶ್ವರನ್ ದೈವಗಳು 429 ಪಟ್ಟಾರ್ ತೆಯ್ಯಂ 430 ಪಟ್ಟೋರಿತ್ತಾಯ 431 ಪಡೆ ಬೀರ ಕಣ್ಣಂಡ ದೊಡ್ಡಯ್ಯ  432-433 ಪಡ್ಕಂತಾಯ ಮತ್ತು  ಗೆಂಡಕೇತ್ರಾಯ 434 ಪತ್ತೊಕ್ಕೆಲು ಜನನಂದ ದೈವ 435-436 :ಪನಯಾರ್  ಮತ್ತು ಸಂಪ್ರದಾಯ ದೈವ 437:ಪಯ್ಯ ಬೈದ್ಯ 438-443’ಪಯ್ಯಂಬಿಲ್ ಚಂದು ತಚ್ಚೋಳಿ ಒದೆನನ್ನ ಮತ್ತು ಪರಿವಾರ 444-445  ಪರವ  ಮತ್ತು ಪರಿವಾರ ನಾಯಕ 446 ಪಂಜಿ ಭೂತ  447  -466 ಪಂಜುರ್ಲಿ ಮತ್ತು ಸೇರಿಗೆ ದೈವಗಳು 467 ಪಾಣರಾಟ 468 ಪಿಲಿ ಭೂತ  469 -471  ಪುದರ್ ಚಿನ್ನ ಬಂಟ ಮತ್ತು  ಪಿಲೆ ಪೆಲತ್ತಿ ದೈವಗಳು 472  ಪುದ  ಮತ್ತು ಪೋತಾಳ‌ 473- 490 ಪುರಾಣ ದೇವತೆಗಳು ಮತ್ತು ಭೂತ ತೆಯ್ಯಂ ಗಳು 491-501 ತುಳುನಾಡಿನ ಪುರುಷ ಭೂತಗಳು  502  ಪುಲಂದಾಯ ಬಂಟ 503 ಪುಲಿಮರಂಞ ತೊಂಡನ್  504 -511   ಪುಲಿಯೂರ್ ಕಾಳಿ  ಪುಳ್ಳಿಕರಂಕಾಳಿ,ಕರಿಂತಿರಿ ನಾಯರ್ ಮತ್ತು ಐವರು ಹುಲಿ ದೈವಗಳು 512  ಪೆರಿಯಾಟ್ ಕಂಡನ್  513  ಪೆರುಂಬಳಯಚ್ಚನ್ 514  ಪೊಟ್ಟನ್  515-  521 ಪೊನ್ನಂಗಾಲತಮ್ಮೆ  ಮತ್ತು ಆರು  ಸಹೋದರರು 522 ಪೊನ್ವಾನ್ ತೊಂಡಚ್ಚನ್ 523-525 ಪೊಸಮಹರಾಯ ,ಉಳ್ಳಾಲ್ತಿಯರು ಮತ್ತು ಮಾಡ್ಲಾಯಿ  526 -536 ಪೋಲೀಸ್,  ಕಳ್ಳ ,ಶಾನುಭಾಗ,ಪಟೇಲ, ಗುರಿಕ್ಕಾರ,ತಿಗಮಾರೆರ್ ,ಬಲಾಯಿಮಾರೆರ್,ಸೇನವ ,ಕಡೆಂಜು ಬಂಟ,ಬಂಕಿನಾಯ್ಕ  ದೈವಗಳು 537 ಪೋಲೀಸ್ ತೆಯ್ಯಂ  538-539 ಬಚ್ಚನಾಯಕ 540 -544 5ಬಬ್ಬರ್ಯ ಮತ್ತು ಸೇರಿಗೆ ದೈವಗಳು  545-548 ಬಲವಾಂಡಿ ,ಕಂಡೆತ್ತಾಯ , ಉಳ್ಳಾಯ ,ಕುರಿಯಾಡಿತ್ತಾಯ 549  ಬಲ್ಲ ಮಂಜತ್ತಾಯ 550-555 ಬಲ್ಲಾಳ ಬಲ್ಲಾಳ್ತಿ ಮತ್ತು ಇತರ ದೈವಗಳು 556 ಬಲೀಂದ್ರ  557  ಬಸ್ತಿನಾಯಕ 558 ಬಂಕಿ ನಾಯ್ಕ  559 ಬಂಡಿ ರಾಮ‌ 560 ಬಾಕುಡತಿ 561 ಬಾಲೆ ಕನ್ಯಾಪು 562 -606 ಬ್ರಾಹ್ಮಣ ಮೂಲದ ದೈವಗಳು 607 ಬಿರ್ಮಣಾಚಾರಿ  608-609   ಬಿಲ್ಲಾರ ಬಿಲ್ಲಾರ್ತಿ ದೈವಗಳು 610 ಕುಂಬಳೆ ಸಿಮೆಯ ಪಟ್ಟದ ದೈವ ಬೀರಣ್ಣಾಳ್ವ 611 ಬೀರ್ನಾಚಾರಿ 612-614 ಬೂಡು ಬೊಮ್ಮಯ್ಯ ಮತ್ತು ಕತ್ತಲೆ ಬೊಮ್ಮಯ್ಯ,ಪಟ್ಟಂತರಸು  615-616 ಬೆರ್ಮೆರ್,ಕಂಬೆರ್ಲು ಮತ್ತು ಹಕ್ಕೆರ್ಲು  617-618 ಬೆಲೆಟಂಗರಜ್ಜ ಮತ್ತು ತಂಗಡಿ 619-620 ಬೇಡವ ಮತ್ತು ಬೇಟೆಗಾರ ದೈವಗಳು 621 ಬೊಟ್ಟಿ ಭೂತ 622 -625:ಬೋವ ದೈವಗಳು . 626 ಬೈನಾಟಿ  627   ಬೈಸು ನಾಯಕ 628-690 ಭಗವತಿ ದೈವಗಳು 691 ಭಟಾರಿ ದೈವ   692-694   ಭದ್ರಕಾಳಿ ,ಭದ್ರಕಾಳಿ ಭಗವತಿ ಮತ್ತು ವಣ್ಣಾತಿ ದೈವ 695 – 696  ಭದ್ರಕಾಳಿಮತ್ತು ಬೊಳ್ಳಿ ಬಿಲ್ ಅಯ್ಯಪ್ಪ  697-698 ಭಂಡಾರಿ ಮತ್ತು ಪಿಲಡ್ಕತ್ತಾಯ‌ 699 ಮಡಿಕತ್ತಾಯ 700-701 ಮದನಕ್ಕೆ ದೈಯಾರ್ ,ಕಳಿಗೋಂಕು ಮಾಬೀರರು 702-703′  ಮದಂಗಲ್ಲಾಯ ಮತ್ತು  ಕಡಂಗಲ್ಲಾಯ  704-705 ಮದಿಮಾಯ ಮದಿಮಾಲ್ 706 ಮನಕ್ಕಡನ್ ಗುರುಕ್ಕಳ್  707 ಮನಕ್ಕೊಟ್ಟ್ ಅಮ್ಮ 708- 716 ಮನ್ಸರ  ದೈವಗಳು 717 ಮರಾಂಗಣೆ 718;ಮರುತಿಯೋಡನ್ ಕುರಿಕ್ಕಳ್ 719-720  ಮಲಯಾಳ ಬ್ರಹ್ಮ ಮತ್ತು ಮಲ್ಯಾಳ ಭಟ್ರು  721 ಮಲರಾಯ 722  ಮಲೆಕುಡಿಯರ ಅಯ್ಯಪ್ಪ  723-726: ಮಲೆ ತಮ್ಮಚ್ಚ ಮತ್ತು ಪರಿವಾರ  727 ಮಲೆರಾಯ ಮತ್ತು ಪರಿವಾರ   728 ಮಲೆಸಾವಿರ ದೈವ 729-730 ಮಂಗಳೆರ್ ಮತ್ತು  ಗುರು ಮಂಗೞೆರ್  731-733 ಮಂತ್ರ ಗಣ ಮಂತ್ರ ದೇವತೆ ಮಂತ್ರ ಮೂರ್ತಿ ದೈವಗಳು 734 ಮಂದ್ರಾಯ 735 ಮಹಾಕಾಳಿ 736  ಮಾಂಕಾಳಿ ದೈವಗಳು 737-741  ಮಾಯಂದಾಲ್ ಮತ್ತು ಪರಿವಾರ   742-743  ಮಾಯೊಲು ಮಾಯೊಲಜ್ಜಿ. 744-757 ಮಾರಿ ಭೂತಗಳು 758-760 ಮಾಲಿಂಗ ರಾಯ ದಂಡಪ್ಪ ನಾಯಕ ಮಂಞ ನಾಯಕ ದೈವಗಳು‌ 761 ಮಾಸ್ತಿಯಮ್ಮ  762-763  ಮಿತ್ತೂರು ನಾಯರ್ ದೈವಗಳು 764 ಮಿಲಿಟ್ರಿ ಅಜ್ಜ  765 ಮೀನು ಗಾರ್ತಿ 766  -780  ಮುಗೇರ ದೈವಗಳು  781 ಮುಡದೇರ್ ಕಾಳ ಭೈರವ  782-784  ಮುತ್ತಪ್ಪನ್ ,ತಿರುವಪ್ಪನ್ ,ಮೂಲಂಪೆತ್ತಮ್ಮ 785  ಮುತ್ತು ಮಾರಿಯಮ್ಮ   786 ಮುನಿಸ್ವಾಮಿ ದೈವ 787 ಮುವ್ವೆ ಮೂವ,ಮೂವಿಗೆ ವಾತೆ  788-813 ಮುಸ್ಲಿಂ ಮೂಲದ ದೈವಗಳು  814  ಮೂಜಿಲ್ನಾಯ  815-816  ಮೂಡೊಟ್ನಾರ್,ಪಡುವೆಟ್ನಾರ್  817  ಮೂರಿಲು 818  ಮೂರ್ತಿಲ್ಲಾಯ 818-900 ಮೂಲ ಪುರುಷ ದೈವಗಳು  901-1055 ಮೆಕ್ಕೆ ಕಟ್ಟಿನ ಉರುಗಳು  1056-1057  ಮೇರ ಮೇತಿಯರು 1058  ಮೇಲಂಟಾಯ  1059  ಮೈಯೊಂದಿ 1060   ಮೈಸಂದಾಯ 1061-1066  ಮೋಂದಿ ಕೋಲ‌ 1067 -1117 ಯಕ್ಷ ಯಕ್ಷಿಯರು ಮತ್ತು ಶ್ರೀಲಂಕಾದ  ಯಕುಮ ಕೋಲ‌  1118-1119  ರಕ್ತೇಶ್ವರಿ ಮತ್ತು ಬವನೊ 1120  ರಾಜನ್ ದೈವಗಳು 1121-1123  ವಣ್ಣಾತನ್ ವಯನಾಡು ಕುಲವನ್,ಕಣ್ಣನ್  1124 ವಡ್ಡಮರಾಯ 1125-1126  ವಿದೇಶೀ ಕಾಫ್ರೀ ದೈವಗಳು 1127-1128 ವಿಷ್ಣು ಮೂರ್ತಿ ಮತ್ತು ಪಾಲಂದಾಯಿ ಕಣ್ಣನ್ 1129-1130  ವೀರಭದ್ರ/ ವೈರಜಾತ್,ವೀರನ್  1131-1134 ವೀರ ವಿಕ್ರಮೆರ್ ಮತ್ತು ಇರ್ವೆರ್ ಬೈದ್ಯೆರ್ 1135  ವೆಳ್ಳು ಕುರಿಕ್ಕಳ್ 1136  ವೇಟಕ್ಕೊರುಮಗನ್ 1137  ವೈದ್ಯಾಚಾರ್ಯ/ ವೈದ್ಯರಾಜನ್  1138  ಶಂಕರ ಬಡವಣ 1139-1141 ಶಾಸ್ತಾವು,ಕರಿ ಭೂತ,ಕೋಮಾಳಿ 1142  ಶಿರಾಡಿ ಭೂತ. 1143  ಶಿವರಾಯ  1144  ಶ್ರೀಮಂತಿ ದೈವ 1145-1146 ಸತ್ಯ ಮಾಗಣ್ತಿ ಮತ್ತು ಕಲ್ಲು ದೈವ  1147-1151  ಬಾಕುಡರ ಸರ್ಪಕೋಲದ ದೈವಗಳು 1152  ಸರ್ಪಂಕಳಿ 1153  ಸರ್ಪಂತುಳ್ಳಲ್ 1154  ಸಂನ್ಯಾಸಿ ಮಂತ್ರ ದೇವತೆ 1155 ಸಾದಿಕರಾಯ ಮತ್ತು ಹಾದಿಕಾರಾಯ  1156  ಸಾರ ಮಾಂಕಾಳಿ 1157 ಸ್ವಾಮಿ ದೈವ  1158-1165  ಸೀತಾಯುಂ ಮಕ್ಕಳುಂ,ದೈವತಾರ್ ಮತ್ತು ಪರಿವಾರ 1166  ಸುಬ್ಬರಾಯ 1167 ಸೋಣದ ಜೋಗಿ 1168 ಸೋಣದಜ್ಜಿ/ ತಡ್ಯದಜ್ಜಿ  1169  ಹನುಮಂತ/ ಸಾರ ಪುಲ್ಲಿದಾರ್ ದೈವ 1170 ಹಳ್ಳತ್ತಾಯ ಮತ್ತು ಅಲ್ನತ್ತಾಯ  1171  ಹಳೆಯಮ್ಮ 1172-1181  ಹಾಯ್ಗುಳಿ ಮತ್ತು ಪರಿವಾರ  1182-1201  ಹಿರಿಯಾಯ ದೈವಗಳು 1202 -1203  ಹುಲಿ ಮತ್ತು ಹಸರ ತಿಮ್ಮ  1204  ಹೊಸಮ್ಮ , 1205 ಹೊಸಳಿಗಮ್ಮ 1206-1207   ಹೌಟಲ್ದಾಯ  ಮತ್ತು ಮಾಳದ ಕೊರಗ 
  ಅನುಬಂಧ:
1 ತುಳು ಕಲಿಕಾ ಪಠ್ಯ 2 ತಿಗಳಾರಿ( ತುಳು) ಲಿಪಿ- ಒಂದು ವಿಶ್ಲೇಷಣಾತ್ಮಕ‌ ಅಧ್ಯಯನ  3 ಭೂತಾರಾಧನೆ ಮತ್ತು ಯಕ್ಷಗಾನ- ಒಂದು ತೌಲನಿಕ ನೋಟ   4 ತುಳುವ ಸಂಸ್ಕಾರಗಳು 5 ಕನ್ನಡ ತುಳು ಜನಪದ ಕಾವ್ಯಗಳಲ್ಲಿ ಸಮಾನ ಆಶಯಗಳು‌ 6 ತುಳು ಭೂತಗಳ ನಡುವೆ ಗೌತಮ‌ ಬುದ್ಧನೂ ಇದ್ದ  7 ಸಾಂಸ್ಕೃತಿಕ‌ ಪದ ಕೋಶ  8  ಕ್ಷೇತ್ರ ಕಾರ್ಯದ ವಿವರ 


* ಕರಾವಳಿಯ ಸಾವಿರದೊಂದು ದೈವಗಳು ಕೃತಿಗಾಗಿ ಸಂಪರ್ಕಿಸಿ
9480516684- ಡಾ.ಲಕ್ಷ್ಮೀ ಜಿ ಪ್ರಸಾದ್ 

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter