ಕಾದಿರುವ ಭೂಮಿಗೆ ಮಳೆ ಸುರಿವ ನಿರೀಕ್ಷೆ
ಅವಿತಿರುವ ಬೀಜಗಳಿಗೆ ಮೊಳೆವ ನಿರೀಕ್ಷೆ
ಕಡಿದ ಗಿಡಗಳಿಗೆ ಮರು ಚಿಗಿಯುವ ನಿರೀಕ್ಷೆ
ಎಳೆಕಾಂಡಕೆ ಮುಗಿಲು ಮುಟ್ಟುವ ನಿರೀಕ್ಷೆ
ಪರಿಮಳದ ಹೂವಿಗೆ ಮುಡಿ ಏರುವ ನಿರೀಕ್ಷೆ
ಹಣ್ಣಿಗೆ ಬೀಜವಾಗಿ ಮಣ್ಣು ಸೇರುವ ನಿರೀಕ್ಷೆ
ಪ್ರಕೃತಿಮಾತೆಗೆ ಗಿಡಗಳ ನೆಡುವ ನಿರೀಕ್ಷೆ
ನೆಟ್ಟ ಗಿಡಕೆ ಮೈದುಂಬಿ ಬೆಳೆವ ನಿರೀಕ್ಷೆ
ಮಾಲತಿ ಬಳ್ಳಿಗೆ ವರ್ಷ ಋತುವಿನ ನಿರೀಕ್ಷೆ
ಜಗದಗಲಕೂ ಬರಗಾಲ ಮುಗಿವ ನಿರೀಕ್ಷೆ
*ಮಾಲತಿ ಹೆಗಡೆ

2 thoughts on “ಗಜಲ್”
ಒಳ್ಳೆಯ ಆಶಯದ ಗಜಲ್. ಅಭಿನಂದನೆಗಳು ಕವಿಯತ್ರಿಗೆ.
ಧನ್ಯವಾದಗಳು ಸರ್