*ಗಜಲ್*

ನಲ್ಲ ಕೊಳಲ ದನಿಯಿಲ್ಲದೆ ಬೃಂದಾವನ ಮೌನವಾಗಿದೆ
ನಲ್ಲ ರಾಸ ಕ್ರೀಡೆಯಿಲ್ಲದೆ ಯಮುನೆ ನೊಂದು ಬಿಕ್ಕುತಿದೆ

ಕಿಟಕಿಯಲಿ ಇಣಿಕಿದ ಶಶಿಯು ಕಚಗುಳಿಟ್ಟು ಕಾಡುತಿರುವನು
ನಲ್ಲ ಜಗವ ಮರೆತು ಕಣ್ಣ ದೃಷ್ಟಿ ಬಾಗಿಲಿಗೆ ನೆಟ್ಟಿದೆ

ತೂಗಿದ ಕಂದೀಲ ಬೆಳಕಿಗೆ ಪತಂಗಗಳು ಮುತ್ತಿಡುತಿವೆ
ನಲ್ಲ ಕನಸ ಕಂಬನಿಯು ಜಾರಿ ತಲೆದಿಂಬು ಒದ್ದೆಯಾಗಿದೆ

ಮುಂಗಾರು ಮೋಡ ಅರ್ಭಟದಲಿ ಮಿಂಚಿ ಗುಡುಗುತಿದೆ ಬಾನಲಿ
ನಲ್ಲ ಸಾವಿರ ಕಣ್ಣಿನ ನವಿಲು ಹೆಜ್ಜೆ ಹಾಕಿ ಕರೆಯುತಿದೆ

ಹಗಲೆಲ್ಲಾ ಹುಚ್ಚಿಯಾಗಿ ಕಾಲ ಸದ್ದು ಆಲಿಸುತ್ತಿರುವೆ
ನಲ್ಲ ಇರುಳೆಲ್ಲಾ ಚಂದಿರ ತಂಬೆಳಕಿನ ಅಗ್ಗಿ ಸುಡುತಿದೆ

ಜೊತೆ ಇರುವಿಕೆ ಜಡ ಬದುಕಿಗೆ ಉತ್ಸಾಹವ ತುಂಬುತ್ತಿತ್ತು
ನಲ್ಲ ಏಕಾಂಗಿ ಬಿಸಿ ಉಸಿರಿಗೆ ಮುಡಿದ ಮೊಗ್ಗು ಕಮರಿದೆ

ಬಳಲಿದ ದೇಹಕೆ ಒಲವ ಮುತ್ತಲ್ಲದೆ ಮತ್ತೇನು ಬೇಕು
ನಲ್ಲ ಅಗಲಿಕೆಯ ಚಿಂತೆ ಚಿತೆಯಾಗಿ “ಪ್ರಭೆ”ಯ ದಹಿಸುತಿದೆ

*ಪ್ರಭಾವತಿ ಎಸ್ ದೇಸಾಯಿ ವಿಜಯಪುರ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai