ಭಕ್ತ ಭಾಗವತರ ಬಿಟ್ಟು
ಹೊರಡುವುದೆಲ್ಲಿಗೆ ನೀನು!
ನಿನಗೆ ಸಿ.ಎಲ್. ಇಲ್ಲ
ನಿನ್ನ ಅಧಿಕಾರ ವರ್ಗಾಯಿಸಲಾಗುವುದಿಲ್ಲ
ಕೇಳಿದ್ದೇ ಭಜನೆಗಳ ಕೇಳಿ
ಸಾಕಾಯಿತು ಅನ್ನುತ್ತಿ
ಒಪ್ಪಿದೆ
ಆದರೆ ಭಜಕರದೇನು ತಪ್ಪಿದೆ?
ಹೊಸ ಭಜನೆ ಬರೆಯುವವರಿಲ್ಲ
ಇತ್ತ
ಭಕ್ತಿಯ ಗದ್ಗದ ತೋರಿ ಹಾಡುವರು ಕೆಲವರು
ಎಲ್ಲವೂ ನಾಟಕ ಅಂತಿ!
ನಟರಾಜ ನೀನು!
ಮಾಡಲಾಗದೆ ಏನೂ?
ಇರಲಿ ಬಿಡು
ಯಾರಾದರೂ
ಹೊಸ ಹಾಡು ಬರೆಯೋ ತನಕ
ನನ್ನ ನಿಂದೇ ಸ್ತುತಿ ಒಪ್ಪಿಕೋ ಜನಕ!
ಮರೆಯದಿರು ಹೋಳಿಗೆಯೂ
ಮೂಲದಲಿ ಕಣಕ!
* ಚಿಂತಾಮಣಿ ಕೊಡ್ಲೆಕೆರೆ
9 thoughts on “ನಿಂದೇ ಸ್ತುತಿ”
‘ನಿಂದೇ ಸ್ತುತಿ’ ಚಿಕ್ಕದಾದರೂ ಕಾವ್ಯ ಸೊಗಸಾಗಿದೆ. ಅಭಿನಂದನೆಗಳು ಕವಿಗಳಿಗೆ.
ಕವಿತೆ ಸೊಗಸಾಗಿ ಮೂಡಿಬಂದಿದೆ. ಅಭಿನಂದನೆಗಳು.
ಸೊಗಸಾದ ಕವನ. ಓದಿ ಸಂತಸವಾಯಿತು.ಅಭಿನಂದನೆಗಳು.
ಚೆನ್ನಾಗಿದೆ.ಅಭಿನಂದನೆಗಳು
ಸಹಜ ಸುಂದರ ವಿಡಂಬನೆ. 👌
ಸಹಜ ಸುಂದರ ಕೃತಿ.
ನಿಂದೆ ಪದ ಪ್ರಯೋಗ ಗಾಢ ವಾಗಿದೆ.
ವಿನೋದ ವಿಡಂಬನೆಗಳಿಂದ ತುಂಬಿದ ಕವನ.
ನವಿರಾದ ಹಾಸ್ಯ ಸಂವಾದ ದಾತನ ಜೊತೆ, ಚೆನ್ನ ಕವನ.
ಅರ್ಥಪೂರ್ಣ ಕವನ ಚಿಂತಾಮಣಿ.