ಮಾಯಾ ಜಿಂಕೆ

ಮನಸಿನ ಆಳಕೆ ಇಳಿದವರಾರೋ

ಈ ಕಡಲಿನ  ಆಳವ ಬಲ್ಲವರೆಷ್ಟೋ

ಅಗಣಿತ ಗಣಿತವ ಇಟ್ಟವರಾರೋ

ಈ ಒಳಗಿನ ರೂಪವ ಅರಿತವರೆಷ್ಟೊ.

ಅರಿತರು ಒಮ್ಮೆ ಸಲಿಸುವ ತೆರದಿ

ಬಯಕೆಯ ಅರಿತು ಬಯಸುವರೊಮ್ಮೆ

ಈ ನವ ಸಾಗರವ ಈಜುವರೆಷ್ಟೋ

ಈ ಮನಸಿನ ಸಲಿಲದಿ ಮುಳುಗಿದರೆಷ್ಟೋ

ಇದು ಮಾಯಾಜಿಂಕೆ ಇದು ಮರೀಚಿಕೆ

ಹಿಡಿದಿಡಲಾರದ ಬಯಲಿನ ಹಾಗೆ

ತಬ್ಬಿ ಕೊಳಲಾಗದ ಗಾಳಿಯ ಹಾಗೆ||

ಕೋಟಿ ಮನಸು ಭದ್ರ ಕೋಟೆಯ ಮನಸು

ಕೋಟಿ ಭಾವ ಕ್ಷಣ ಬಿಭ್ರಾಂತ

ತೆರೆ ತೆರೆಯಂತೆ ಭಾವ ಭಾವಗಳು ಭವವಿದೂರ

ಭಾಷೆಗೂ ನಿಲುಕದು ಅನಿರ್ವಚನೀಯ

ಗತಿ ತರಂಗಿಣಿ ಚಕಿತ ವಿಸ್ಮಿನಿ ಗಮನೀಯ

ಇದು ಅನಂತ ಇದು ಅಕ್ಷಯ ಪಥ

ಬಿಟ್ಟಿರಲಾರದ ಗುಟ್ಟು ಬಿಟ್ಟು ಕೊಡಲಾರದ

ಇದು ಮಾಯಾ ಮನಸು ಇದು ಕಾಯಕೆ ಸೊಗಸು

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಮಾಯಾ ಜಿಂಕೆ”

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter