ಅವ್ಯಕ್ತ

ವ್ಯಕ್ತಗೊಳ್ಳುತ್ತೇನೆ ನಾನು

ಅವ್ಯಕ್ತಕ್ಕೆ ತಳ್ಳುವ ಕೈಗಳ

ಕಿರುಬೆರಳ ಸಂದಿಯಲಿ ಜುಗುಳಿ

ನಕ್ಷತ್ರ ನಿಹಾರಿಕೆಗಳ 

ಜೊತೆಗೂಡುತ್ತೇನೆ.

ನಿರ್ವಾತದಲ್ಲೂ ನಿರತ ಉಸಿರಾಡುತ್ತಾ

ಪದವಿನೋದ ಗಾನ ಪಾಡುತ್ತಾ

ತಿವಿಯ ಬಂದವರೆಡೆಗೆ

ನಸುನಗುತ್ತ ಪ್ರೀತಿತೆನೆ

ಕೊಯ್ಯುತ್ತೇನೆ

ಎಲ್ಲೋ ಹುಟ್ಟಿ 

ಮತ್ತೆಲ್ಲೋ ಸಾಯುವ ಹಕ್ಕಿ

ಹಾರುವ ಖುಷಿಯಲ್ಲೆ

ಬದುಕಿನಂದವ ಪಾಡುವ ಪರಿ

ಕನಸುತ್ತೇನೆ.

ರಹದಾರಿಯ ಅರಿವಿಲ್ಲದೆಯೂ

ಹಾರುವ ಬಣ್ಣದ ಚಿಟ್ಟೆ

ಬೆನ್ನು ಹತ್ತಿ 

ಕಾಲಬದಲಾದಂತೆ 

ಬಣ್ಣ ಬದಲಾಯಿಸುವ 

ಗೋಸುಂಬೆಗಳ ಅಂಟು ಜಿಹ್ವೆಯ

ಜೊಲ್ಲಿಗೆ ನಿಲುಕದೆ

ಬೆಳಕಿನೆಡೆಗೆ ಜಿಗಿಯುವ 

ಹಾತೆಯಾಗುತ್ತೇನೆ 

ಉರಿವ ಜ್ವಾಲೆಗೆ ಮೈ ಸುಟ್ಟುಕೊಂಡು

ಅಗ್ನಿದಿವ್ಯದ ಎದುರು ಸ್ಫುಟಗೊಳ್ಳುತ್ತೇನೆ 

ಮುಕ್ತಳಾಗುತ್ತೇನೆ   ನಾ ..ನು..

*ನಾಗರೇಖಾ ಗಾಂವಕರ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

5 thoughts on “ಅವ್ಯಕ್ತ”

  1. ನಾಗರಾಜ್ ಹರಪನಹಳ್ಳಿ

    ಚೆಂದ ಕವಿತೆ.
    ಹೆಣ್ಣಿನ ಬಿಡುಗಡೆ ಹಾಗೂ ಸ್ವಾತಂತ್ರ್ಯದ ಹಂಬಲವ ಅತ್ಯಂತ ಬಿಗಿ‌ಬಂಧದಲ್ಲಿ‌ ಹಿಡಿದಿದ್ದಾಳೆ ಕವಯಿತ್ರಿ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter