ಬೆಂಗಳೂರು: ದಲಿತ ಕವಿ ಡಾ. ಸಿದ್ದಲಿಂಗಯ್ಯ (೬೭) ಇಂದು ಕರೋನಾ ಸೋಂಕಿನಿಂದ ನಗರದ ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದಿದ್ದಾರೆ.
’ಹೊಲೆಮಾದಿಗರ ಹಾಡು’, ’ಸಾವಿರಾರು ನದಿಗಳು’, ’ಕಪ್ಪು ಕಾಡಿನ ಹಾಡು’, ’ನನ್ನ ಜನಗಳು’ ಮುಂತಾದ ಹಲವು ಕವನ ಸಂಗ್ರಹಗಳನ್ನು, ನಾಟಕ ಮತ್ತು ಇತರ ಸಾಹಿತ್ಯವನ್ನು ಸಾಮಾಜಿಕ ಸಮಾನತೆಗಾಗಿ ಇವರು ರಚಿಸಿದ್ದಾರೆ . ಇವರ” ಊರು ಕೇರಿ” ಎಂಬ ಆತ್ಮಕಥನವು ಪ್ರಕಟಗೊಂಡಿತ್ತು.
ಎರಡು ಬಾರಿ ವಿಧಾನಪರಿಷತ್ತಿನ ಸದಸ್ಯರಾಗಿದ್ದ ಸಿದ್ದಲಿಂಗಯ್ಯ ಅವರು ಪಂಪ ಪ್ರಶಸ್ತಿ, ನಾಡೋಜ, ಸಾಹಿತ್ಯ ಆಕಾಡೆಮಿ ಪ್ರಶಸ್ತಿ, ನೃಪತುಂಗ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದು ಕೊಂಡಿದ್ದಾರೆ. ಅಗಲಿದ ಅತ್ಮಕ್ಕೆ ’ವಿಶ್ವಧ್ವನಿ’ ಬಳಗದ ಭಾವಪೂರ್ಣ ಶ್ರದ್ದಾಂಜಲಿ.
ನಾನು ಸತ್ತರೆ ನೀವು ಅಳುವಿರಿ
ನಿಮ್ಮ ಕೂಗು ನನಗೆ ಕೇಳಿಸದು
ನನ್ನ ನೋವಿಗೆ ಈಗಲೇ ಮರುಗಲಾಗದೇ
ನೀವು ಹೂಮಾಲೆ ಹೊದಿಸುವಿರಿ
ನೋಡಲಾದೀತೇನು ನನಗೆ
ಚೆಂದನೆಯ ಹೂವೊಂದ ಈಗಲೇ
ನೀಡಲಾಗದೇ
ನನ್ನ ಗುಣಗಾನ ಮಾಡುವಿರಿ
ನನಗೆ ಕೇಳೀತೇ ಹೇಳಿ
ಒಂದೆರಡು ಹೊಗಳಿಕೆಯ ಮಾತು
ಈಗಲೇ ಆಡಲಾರಿರೇ ..
ನನ್ನ ತಪ್ಪುಗಳನ್ನು ಮನ್ನಿಸುವಿರಿ
ನನಗರಿವಾಗುವುದೇ ಇಲ್ಲ
ಜೀವ ಇರುತ್ತಾ ಕ್ಷಮಿಸಲಾಗದೇ …
ನನ್ನ ಅನುಪಸ್ಥಿತಿಗೆ ಕೊರಗುವಿರಿ
ನನಗೆ ತಿಳಿಯುವುದೇ ಇಲ್ಲ
ಈಗಲೇ ಭೇಟಿ ಮಾಡಲೇನು ..
ನನ್ನ ನಿರ್ಗಮನದ ಸುದ್ದಿ ತಿಳಿಯುತ್ತಲೇ
ಮನೆಯತ್ತ ಧಾವಿಸುವಿರಿ ಶ್ರದ್ಧಾಂಜಲಿ ಹೇಳೋ ಬದಲು ಈವಾಗಲೇ
ಸುಖ ದುಃಖ ಹಂಚಿಕೊಳ್ಳಲಾಗದೇನು .
ಮಿಂಚಿ ಹೋಗುವ ಮುನ್ನ ಹಂಚಿ
ಬಾಳುವ ಬದುಕು ಸಹ್ಯವಲ್ಲವೇನು ….. ಡಾ.ಸಿದ್ಧಲಿಂಗಯ್ಯನವರ ಭಾವನಾತ್ಮಕ ಕವಿತೆ
1 thought on “ಕವಿ ಡಾ. ಸಿದ್ದಲಿಂಗಯ್ಯ- ಇನ್ನಿಲ್ಲ”
Bhavapoorna. Shrdhanjali