*ಜ್ಞಾನ ಜ್ಯೋತಿಗೆ ಶರಣು*

ಹುಟ್ಟು ಸೂತಕದ ಕುರುಹು ತ್ಯಜಿಸಿದಾತ
ಅರಿವಿನ ಲಿಂಗವ ಕರದೊಳು ಕೊಟ್ಟಾತ
ನರಜನ್ಮಕೆ ಹರಜನ್ಮದ ಅರಿವು ಮೂಡಿಸಿದಾತ
ಭವ ಬಂಧನವ ಬಿಡಿಸಿದಾತಂಗೆ ಶರಣು

ಜ್ಞಾನದ ಬೀಜ ಬಿತ್ತಿ,ಅಜ್ಞಾನದ ಕಳೆ ಕಳೆದಾತ
ಲಿಂಗ ಭೇದವ ಅಳಿಸಿ ಸಮಾನತೆ ಹಕ್ಕು ನೀಡಿದಾತ
ಜಾತಿಯ ಅಳಿಸಿ ಜಾತ್ಯಾತೀತ ರಾಷ್ಟ್ರ ನಿಮಿ೯ಸಿದಾತ
ಶೋಷಣೆಯ ಧಿಕ್ಕರಿಸಿದಾತಂಗೆ ಶರಣು

ನೊಂದ ಹೃದಯಗಳ ಒಂದು ಗೂಡಿಸಿದಾತ
ಕಾಯಕದಿ ಆಥಿ೯ಕ ಸಮಾನತೆ ಸಾರಿದಾತ
ವೇದ ಉಪನಿಷತ್ತುಗಳ ಭಾಷ್ಯವ ತ್ಯಜಿದಾತ
ವಚನಾನುಭವಾಮೃತವ  ಉಣಿಸಿದಾದಂಗೆ ಶರಣು

ದೇಹವೇ ದೇವಾಲಯ,ಶಿರವೇ ಹೊನ್ನಕಳಸವೆಂದಾತ
ದಯವೇ ಧರ್ಮದ ಮೂಲವೆಂದಾತ
ಗುರು ಲಿಂಗ ಜಂಗಮ ಗಳ ತ್ರಿಕೂಟ ನಿಮಿ೯ಸಿದಾತ
ದಾಸೋಹವೇ ಸಹ ಬಾಳ್ವೆ ಎಂದಾತಂಗೆ ಶರಣು

ಭವದ ವ್ಯವಹಾರಕೆ ದಂಡಾಧೀಶನಾದಾತ
ನುಡಿದಂತೆ ನಡೆದು ಕಾಯಕ ನಿಷ್ಠೆ ತೋರಿಸಿದಾತ
ಶರಣ ಸತಿ ಲಿಂಗಪತಿ ಎಂದು ಭವದಲಿ ಬಾಳಿದಾತ
ಭಕ್ತಿ ಭಂಡಾರಿಯಾದ ಅಣ್ಣ ಬಸವಂಗೆ ಶರಣು

ಕಲ್ಯಾಣದಲಿ ಅನುಭವ ಮಂಟಪ ಸ್ಥಾಪಿದಾತ
ಜಗಕೆ ಪ್ರಜಾ ಪ್ರಭುತ್ವದ ಕಲ್ಪನೆ ಹುಟ್ಟಿಸಿದಾತ
ಬಿಜ್ಜಳನ ಅಮಾತ್ಯ ಪದವಿಯ ತ್ಯಜಿಸಿದಾತ
ಭವದಲಿ ಜ್ಞಾನ ಜ್ಯೋತಿ ಬೆಳಗಿಸಿದಾತಂಗೆ ಶರಣು.

  • ಪ್ರಭಾವತಿ ಎಸ್ ದೇಸಾಯಿ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “*ಜ್ಞಾನ ಜ್ಯೋತಿಗೆ ಶರಣು*”

  1. ಭಾಗ್ಯವತಿ ಕೆಂಭಾವಿ

    ಜ್ಞಾನ ಜ್ಯೋತಿಗೆ ನಾ ಶರಣು…
    ಅರ್ಥಪೂರ್ಣವಾಗಿದೆ ಮೇಡಂ ಜೀ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter