ಕನ್ನಡ ಪಾಠಶಾಲೆ : 7ನೇ ವರ್ಷದ ಶೈಕ್ಷಣಿಕ ಸಮಾರೋಪ ಸಮಾರಂಭ

ದುಬೈ : ಕನ್ನಡ ಮಿತ್ರರು ಯುಎಇ ಸಂಘಟನೆ,  ನಡೆಸುತ್ತಿರುವ ವಿಶ್ವದ ಅತಿ ದೊಡ್ಡ ಕನ್ನಡ ಕಲಿಕಾ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ ಕನ್ನಡ ಪಾಠಶಾಲೆ , ದುಬೈ-ಇವರ  7 ನೇ ವರ್ಷದ ಶೈಕ್ಷಣಿಕ ಸಮಾರೋಪ ಸಮಾರಂಭ ಮೇ 7 ರಂದು ಶುಕ್ರವಾರ ಝೂಮ್  ಮುಖಾಂತರ  ನಡೆಯಿತು .

ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಶ್ರೀ. ಟಿ. ಎಸ್. ನಾಗಾಭರಣ , (ಮಾನ್ಯ ಅಧ್ಯಕ್ಷರು , ಕನ್ನಡ ಅಭಿವೃದ್ಧಿ ಪ್ರಾಧಿಕಾರ ) ,  ಶ್ರೀ.ವಿಶ್ವೇಶ್ವರಭಟ್  ( ಸಂಪಾದಕರು , ವಿಶ್ವವಾಣಿ ಪತ್ರಿಕೆ ) ,  ಶ್ರೀ   ಚಂದನ್ ಶರ್ಮ  (ಕಾರ್ಯಕಾರಿ ಸಂಪಾದಕರು ,ಟಿವಿ 5 ) , ಶ್ರೀ.  ಪ್ರವೀಣ್ ಶೆಟ್ಟಿ ( ಮಾನ್ಯ ಅಧ್ಯಕ್ಷರು , ಅನಿವಾಸಿ ಭಾರತೀಯ ಸಮಿತಿ ) ಹಾಗೂ ಶ್ರೀ. ಮೋಹನ್ ನರಸಿಂಹಮೂರ್ತಿ ( ಮಾನ್ಯ ಉಪಾಧ್ಯಕ್ಷರು , ಅನಿವಾಸಿ ಭಾರತೀಯ  ಸಮಿತಿ ) ಪಾಲ್ಗೊಂಡಿದ್ದರು .

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀ. ಟಿ. ಎಸ್. ನಾಗಾಭರಣರವರು ದೂರದ ಅರಬ್ಬರನಾಡಿನಲ್ಲಿ ಕನ್ನಡ ಕಟ್ಟುವ ಕನ್ನಡ ಮಿತ್ರರ ಪ್ರಯತ್ನವನ್ನು ಅಭಿನಂದಿಸುತ್ತಾ ಕನ್ನಡಭಾಷೆಯ ಹಿರಿಮೆಯನ್ನು ಮತ್ತು ಇತಿಹಾಸವನ್ನು   ಮಾತ್ರ ಕನ್ನಡ ಭಾಷೆ ಭವಿಷ್ಯದಲ್ಲಿ ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳಲು ಸಾಧ್ಯ ಎಂಬ ಕಾಳಜಿ ವ್ಯಕ್ತಪಡಿಸಿದರು ಮತ್ತು ಮಕ್ಕಳಿಗೆ ಕನ್ನಡ ಆಟಿಕೆಗಳ ಮೂಲಕ ಕನ್ನಡಭಾಷೆ ಕಲಿಸುವ ಚಿಂತನೆ ರೂಪು ಗೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು .

ಮತ್ತೋರ್ವ ಮುಖ್ಯ ಅತಿಥಿಗಳಾದ ಶ್ರೀ. ವಿಶ್ವೇಶ್ವರ ಭಟ್ರವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲೇ  ಮಾತೃ ಭಾಷಾ ತಾತ್ಸಾರದ ಕುರಿತು ಬೇಸರ ವ್ಯಕ್ತ ಪಡಿಸುತ್ತಾ ,  ಮಾತೃ ಭಾಷೆಯನ್ನು ನವ ಪೀಳಿಗೆಗೆ  ವರ್ಗಾಹಿಸದೆ ಹೋದಲ್ಲಿ ನಮ್ಮ ಸಾಂಸ್ಕೃತಿಕ  ಕೊಂಡಿ ಕಳಚಿ ಬೀಳುವ ಆತಂಕ ವ್ಯಕ್ತಪಡಿಸಿದರು . ಮತ್ತು ಮಕ್ಕಳಿಗೆ  ಮಾತೃ ಭಾಷೆಯ  ಮಹತ್ವದ ಬಗ್ಗೆ ಹೆಚ್ಚು ತಿಳಿಸಿಕೊಡುವಂತೆ ಪೋಷಕರಿಗೆ ಕರೆ ನೀಡಿದರು,  ಕನ್ನಡ ಮಿತ್ರರು ಯುಎಇ ನಡೆಸುತ್ತಿರುವ  , ಕನ್ನಡ ಪಾಠಶಾಲೆ , ದುಬೈನ ಮಾದರಿಯಲ್ಲಿಯೇ  ಕನ್ನಡ ಕಲಿಸುವ ಪ್ರಯತ್ನಗಳು  ಕರ್ನಾಟದಲ್ಲಿಯೇ  ಹೆಚ್ಛಾಗಿ  ನಡೆಯ ಬೇಕೆಂದು ಅಭಿಪ್ರಾಯಪಟ್ಟರು.

ಇನ್ನೋರ್ವ  ಮುಖ್ಯ ಅತಿಥಿಗಳಾದ  ಶ್ರೀ  ಚಂದನ್ ಶರ್ಮರವರು ತಮ್ಮ ಬಾಲ್ಯದ ದಿನಗಳನ್ನು  ನೆನೆಯುತ್ತ ಕನ್ನಡ ಪಾಠಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು ಹಾಗು ಸರ್ಕಾರಿ ಕ್ಷೇತ್ರಗಳಲ್ಲಿ ಕನ್ನಡ ಭಾಷೆ ಕಡ್ಡಾಯ ಇಲ್ಲದಿರುವುದು ,  ಕನ್ನಡಿಗರಿಗೆ ಮಾತೃ ಭಾಷಾ ಸಂವಹನದ  ವಂಚನೆಗೆ ಕಾರಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು .

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಕನ್ನಡ ಮಿತ್ರರು ಸಂಘಟನೆ  ಹಾಗು ಕನ್ನಡ ಪಾಠಶಾಲೆ , ದುಬೈನ ಅಧ್ಯಕ್ಷರಾದ ಶ್ರೀ. ಶಶಿಧರ್ ನಾಗರಾಜಪ್ಪರವರು  , ಆನ್ ಲೈನ್ ತರಗತಿಗಳ ಮೂಲಕವೇ  ಕರೋನ ನಡುವೆಯೂ ಕನ್ನಡ ಕಲಿಸುವ 13 ಶಾಲಾ ಶಿಕ್ಷಕಿಯರ  ಬದ್ಧತೆಯನ್ನು ಪ್ರಶಂಶಿಸಿದರು .

ಇದೆ ಸಮಾರಂಭದಲ್ಲಿ  ಕನ್ನಡ ಮಿತ್ರರು ಯುಎಇ ಸಂಘಟನೆಯ ಈ ಬಾರಿಯ “ ಕನ್ನಡ ಮಿತ್ರ “  ಪ್ರಶಸ್ತಿಯನ್ನು ತಮ್ಮ ಶಾಲೆಗೆ ಸೇರುವ ಪ್ರತಿ ಮಗುವಿಗೆ ಸ್ವಂತ ಹಣದಿಂದ ಬಾಂಡ್ ನೀಡುವ  ,ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ , ನೂಲಿಗ್ಗೆರೆಗ್ರಾಮ , ಹೊಸನಗರ (ತಾ) ಇಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ  ಶ್ರೀಮತಿ  ರೇಖಾ ಪ್ರಭಾಕರ್ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ  ಶಾಲೆ  ,  ಅಂಬೇಡ್ಕರ್ ನಗರ , ನಿಡಗುಂದಿ (ತಾ)  ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸುಗಳನ್ನು ನಡೆಸುತ್ತಿರುವಮುಖ್ಯ ಶಿಕ್ಷಕರಾದ ಶ್ರೀ ವೀರಣ್ಣ ಮಡಿವಾಳ ಇವರಿಗೆ ನೀಡಿ ಪುರಸ್ಕರಿಸಲಾಯಿತು 

4 ವರ್ಷಗಳಿಂದ ಕನ್ನಡ ಪಾಠಶಾಲೆಯಲ್ಲಿ ನಿರಂತರವಾಗಿ  ಶಿಕ್ಷಕಿಯರಾಗಿ ಸೇವೆ ಸಲ್ಲಿಸಿದ  ಶಿಕ್ಷಕಿಯರಿಗೆ ನೀಡುವ  ಶಿಕ್ಷಣ  ಕೌಸ್ತುಭ ಪ್ರಶಸ್ತಿ ಪ್ರಧಾನ ಮಾಡಿ ಪುರಸ್ಕರಿಸಲಾಹಿತು .

ಮತ್ತು ಈ ಬಾರಿ ಕನ್ನಡಮಿತ್ರರುಯುಎಇಸಂಘಟನೆಯ ಕಡಲಾಚೆಯಿಂ ಕರುನಾಡಿಗೆ ಯೋಜನೆಯಡಿ ಚತುರ ಶಾಲಾ  ಸಂವರ್ಧನೆಗೆ ಆಯ್ಕೆಯಾದ 3  ಸರ್ಕಾರಿ ಗಡಿ ಭಾಗದ ಶಾಲೆಗಳನ್ನು ಘೋಷಿಸಲಾಯಿತು .

ಕಾರ್ಯಕ್ರಮದಲ್ಲಿ ಕನ್ನಡ ಮಿತ್ರರು ಯುಎಇ ಸಂಘಟನೆಯ ಉಪಾಧ್ಯಕ್ಷರಾದ ಶ್ರೀ ಸಿದ್ದಲಿಂಗೇಶ್  , ಕಾರ್ಯದರ್ಶಿಗಳಾದ ಶ್ರೀ ಸುನಿಲ್   ಗವಾಸ್ಕರ್  , ಜಂಟಿ ಕಾರ್ಯದರ್ಶಿಗಳಾದ ಶ್ರೀ ಶಿವ ಶರಣಪ್ಪ ಮೇಟಿ ಮತ್ತು ಖಜಾಂಚಿಗಳಾದ  ಶ್ರೀನಾಗರಾಜ ರಾವ್ ಮಾತೃ ಭಾಷೆಯ  ಮಹತ್ವದ ಬಗ್ಗೆ ಕರೆನೀಡಿದರು.

ಕಾರ್ಯಕ್ರಮದಲ್ಲಿ ಯುಎಇ ಯಲ್ಲಿರುವ ಎಲ್ಲ ಕನ್ನಡ ಪರ ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು . ಪೋಷಕರು ಹಾಗು ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ  ಕಾರ್ಯಕ್ರ ಮಗಳು  ನೋಡುಗರ  ಮನಸೆಳೆದವು .

ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಕಾವ್ಯ ಯುವರಾಜ್ ನಡೆಸಿ ಕೊಟ್ಟರು  . ಎಲ್ಲ ಅತಿಥಿಗಳನ್ನು  ಕನ್ನಡ ಮಿತ್ರರು ಸಂಘಟನೆಯ ಸಂಘಟನಾ ಕಾರ್ಯದರ್ಶಿ ಶ್ರೀ. ವಿನಯ್ ಕುಮಾರ್ ಸ್ವಾಗತಿಸಿದರೆ , ಮಾಧ್ಯಮ ಸಂಚಾಲಕರಾದ ಶ್ರೀ ಬಾನುಕುಮಾರ್ ವಂದನಾರ್ಪಣೆ ಮಾಡಿದರು .

                                                                                                                                ವರದಿ: ಪತ್ರಿಕಾ ಪ್ರಕಟಣೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter