ನಿನಗೆ ನಾನೇ
ನನಗೆ ನೀನೇ
ಶರಾಬು;
ಗುಟುಕು ಗುಟುಕಿಗೂ
ಅಮಲು – ಘಮಲು
ಮಬ್ಬುಗತ್ತಲು ತಂಬೆಳಲು
ನಿಚ್ಚಬೆಳಕು ನಡು ಇರುಳು
ಕಾಲಮಾನಗಳ ಅದಲು ಬದಲು
ತವಕಿಸುವ ತುಟಿಗಳ ಸೋಕಿ
ಕಣ್ಣುಗಳಿಗೆ ಕತ್ತಲೆ
ಹೂವ ಮುಡಿಸಿ
ನಿನ್ನ ನಾ ಕುಡಿದು
ನನ್ನ ನೀ ಕುಡಿವಾಗ
ಒಬ್ಬರಿಗೊಬ್ಬರು ಹಂಚಿಕೊಂಡು
ನೆಂಚಿಕೊಂಡು
ತೂರಾಟಕ್ಕೆ ಊಡಾಗಿ
ತೊದಲು ಹಾಡಾಗಿ
ಪ್ರೇಮಕ್ಕೆ ಈಡಾದಾಗ
ಸಗ್ಗ ಸೂರೆಗೊಂಡಿತು.
ನಾವು ಕುಡಿದದ್ದು
ಶರಾಬೇ ಆಗಿದ್ದರೆ ಬಹುಶಃ ಬಿಟ್ಟು ಬಿಡಬಹುದಿತ್ತೇನೊ…?
ಆದರೆ…..
ನಾನು – ನೀನು
ಕುಡಿದದ್ದು ಶರಾಬಿಗೂ ಮಿಗಿಲಾದ
ಅಮಲೇ ಇಳಿಯದ
ಪ್ರೇಮವಲ್ಲವೆ!