ಎಲ್ಲಿ ದೊರೆತಾರು ಬಿಡು
ನಿನ್ನಂಥ ಕಲೆಗಾರ
ಮಧುಮಾಸ ರಾಗದಲ್ಲೆ
ಎಲ್ಲ ವ್ಯವಹಾರ
ಚಂದ್ರಮಾಯೆಯು ಕವಿದ
ಸ್ವಪ್ನ ನಗರಿಯಲ್ಲಿ
ಏನೆಲ್ಲ ತಬ್ಬಿ ತೋರಿಸಿದೆ
ಮಂತ್ರಲೋಕದಂತೆ ಅಲ್ಲಿ
ತೂಗುತಿಹ ಜೋಕಾಲಿ
ಅಲೆಯುತಿಹ ಮೇಘಗಳು
ಮತ್ತೆ ಸುರಿದಿಹ ಪ್ರೀತಿ
ಮಿಂಚು ರಸದ ಹೊನಲು
ಬಾನು ಕಡಲರಿಯದಾಳದಿ
ಗಿರಕಿ ಹೊಡೆಯುತಲಿರುವೆ
ಮುತ್ತ ಮಳೆ ಸುರಿಸುವೆನು
ಜಗವ ಮರೆತಿರುವೆ
ಕಿಲಕಿಲನೆ ನಗಿಸುತ್ತ ಕುಳಿತು
ನೀ ಕಚಗುಳಿಯಿಡುತಲಿರೆ
ಮುಕ್ತಿಯೂ ಬೇಡ ಅದಕಿಂತ
ಮಿಗಿಲು ನೀ ಬಳಿಸಾರಿರೆ
*ಯಶೋದಾ ಭಟ್ಟ ದುಬೈ*
