ಕರ್ನಾಟಕ ಸಂಘ ಕತಾರ್ -ವಾರ್ಷಿಕ ರಕ್ತದಾನ ಶಿಬಿರ ೨೦೨೧

ದೋಹಾ ಕತಾರ್: ಕರ್ನಾಟಕ ಸಂಘ ಕತಾರ್ ದಿನಾಂಕ ೦೯.೦೪.೨೦೨೧, ಶುಕ್ರವಾರ ಮುಂಜಾನೆ ೮:೦೦ ಗಂಟೆಯಿಂದ ಮಧ್ಯಾಹ್ನ ೧೧:೩೦ ಗಂಟೆಯ ವರೆಗೆ ’ಹಮಾದ್ ವೈದ್ಯಕೀಯ ಕೇಂದ್ರ’ದ ಅಂಗಳದಲ್ಲಿರುವ ’ಹಮಾದ್ ರಕ್ತದಾನ ಕೇಂದ್ರದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.

ಪುರುಷರು ಮತ್ತು ಮಹಿಳೆಯರು ಸೇರಿ ಈ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಕರೋನಾ ಮಹಾಮಾರಿಯ ಪ್ರಸಾರವನ್ನು ತಡೆಗಟ್ಟಲು ಎಲ್ಲರೂ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದರು. ’ಕರೋನಾ’ ದ ಎರಡನೆಯ ಅಲೆಯು ಹರಡುತ್ತಿರುವ ಸಂದರ್ಭದಲ್ಲೂ ಸಂಘವು ಸಮಾಜ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಂಡದ್ದು ಶ್ಲಾಘನೀಯ. ವಿಶೇಷವಾಗಿ ಭಾರತೀಯ ಸಂಸ್ಕೃತಿಕ ಕೇಂದ್ರದಡಿಯಲ್ಲಿ ’ಭಾರತದ ೭೫ನೇ ಸ್ವತಂತ್ರದ ಅಮೃತ ಮಹೋತ್ಸವ’ದ ಅಂಗವಾಗಿ ನಡೆದ ಪ್ರಥಮ ಕಾರ್ಯಕ್ರಮವು ಇದಾಗಿತ್ತು.

ಸಂಘದ ಸಾಂಸ್ಕೃತಿಕ ಕಾರ್ಯದರ್ಶಿಯಾದ ಶ್ರೀಮತಿ ಅಕ್ಷಯ ಶೆಟ್ಟಿ ಅವರು ಸ್ವಾಗತ ಭಾಷಣ ನೀಡಿ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಸಂಘದ ಅಧ್ಯಕ್ಷರಾದ ಶ್ರೀ ನಾಗೇಶ್ ರಾವ್ ಗಣ್ಯರನ್ನು ಸ್ವಾಗತಿಸಿದರು. ಐ.ಸಿ.ಸಿ ಅಧ್ಯಕ್ಷರಾದ ಶ್ರೀ ಬಾಬು ರಾಜನ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಐ.ಸಿ.ಸಿ ಉಪಾಧ್ಯಕ್ಷರಾದ ಶ್ರೀ ಸುಬ್ರಮಣ್ಯ ಹೆಬ್ಬಾಗಿಲು ಕಾರ್ಯಕ್ರಮದ ಸಂಚಾಲಕರಾಗಿ ಸಕಲ ಸಿದ್ಧತೆಗಳನ್ನು ಯಶಸ್ವಿಯಾಗಿ ನೆರವೇರಿಸಿದ್ದರು. ಐ.ಸಿ.ಬಿ.ಎಫ಼್ ಅಧ್ಯಕ್ಷರಾದ ಶ್ರೀ ಜಯೀದ್ ಉಸ್ಮಾನ್, ಕರ್ನಾಟಕ ಸಂಘದ ಪೂರ್ವಾಧ್ಯಕ್ಷರಾದ ಶ್ರೀ ವೇಂಕಟ ರಾವ್, ಶ್ರೀ ದೀಪಕ್ ಶೆಟ್ಟಿ, ಶ್ರೀ ವೀರಭದ್ರಪ್ಪ ಮನ್ನಂಗಿ, ಶ್ರೀ ಅರುಣ್ ಕುಮಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಇತರ ಗಣ್ಯರು. ಕರ್ನಾಟಕ ಮೂಲದ ಇತರ ಸಹೋದರ ಸಂಸ್ಥೆಗಳಾದ ತುಳುಕೂಟ, ಬಂಟ್ಸ್ ಕತಾರ್, ಎಂ.ಸಿ.ಎ, ಕೆ.ಎಂ.ಸಿ.ಎ, ಎಂ.ಸಿ.ಸಿ ಹಾಗು ಎಸ್.ಕೆ.ಎಂ.ಡಬ್ಲು.ಎ ಅಧ್ಯಕ್ಷರುಗಳು ಉಪಸ್ಥಿತರಿದ್ದರು.

ಹಮಾದ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ|| ಗಿರೀಶ್ ಅವರು ವಿಶೇಷ ಆಹ್ವಾನಿತರಾಗಿ ಆಗಮಿಸಿ, ಸಭಿಕರಿಗೆ ರಕ್ತದಾನದ ಹಿನ್ನೆಲೆ, ಉಗಮ, ಪ್ರಯೋಜನ ಮತ್ತು ಇತರ ಉಪಯುಕ್ತ ಮಾಹಿತಿಗಳನ್ನು ನೀಡಿ, ಜನರಲ್ಲಿರುವ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಿಸಿದರು. ಕರೋನಾ ಲಸಿಕೆ ಬಗ್ಗೆ ಹೇಳಿತ್ತಾ, ಪೀಡಿತರು ತೆಗೆದುಕೊಳ್ಳಬೇಕಾದ ಮುನ್ನೆಚರಿಗೆ ಕ್ರಮಗಳನ್ನು ತಿಳಿಹೇಳಿದರು. ಮಾಹಿತಿ ಭರಿತ ಕಿರುಭಾಷಣ ಎಲ್ಲರಿಗೂ ವೈದ್ಯಕೀಯ ವಿವರಣೆ ರವಾನಿಸಿತು.

ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಮುರಳೀಧರ ರಾವ್ ಅವರು ವಂದನಾರ್ಪಣೆಗಳನ್ನು ನೀಡಿ ಕಾರ್ಯಕ್ರಮವನ್ನು ಸಮಾಪ್ತಗೊಳಿಸಿದರು.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai