ಅರಿವಿಲ್ಲದೆ ನಾನಾದೆ ಅಸ್ಥಿ
ಗಳಿಸುತ್ತ ನನ್ನವರಿಗೆ ಆಸ್ತಿ
ಕುಳಿತು ತಿನ್ನಲೆಂದು ನನ್ನ ಪೀಳಿಗೆ
ಕೂಡಲಿಲ್ಲ ನಾನೊಂದು ಗಳಿಗೆ
ಹಣದ ಮಿತಿ ಇಲ್ಲದ ದಾಹ
ತೀರಲಿಲ್ಲ ನನ್ನ ವ್ಯಾಮೋಹ
ಬೇಕಿತ್ತು ಸ್ವಲ್ಪ ವಿಶ್ರಾಂತಿ
ಸಿಕ್ಕಿದ್ದು ಕೊನೆಗೆ ಚಿರಶಾಂತಿ.
ಅಸ್ಥಿಯಾಯಿತು ಗಂಗೆಯಲ್ಲಿ ವಿಲೀನ
ಆಸ್ತಿಗಾಗಿ ನಡೆಯುತಿತ್ತು ಮಹಾ ಕದನ
ಕಳೆಯಿತು ಹದಿಮೂರು ದಿನ
ಆಯಿತು ಪಿಂಡ ದಾನ
ಮುಗಿಯಿತು ಎಲ್ಲಾ ರೀತಿಯ ಬಂಧನ…!
ಡಾ. ಕವಿತಾ