ದುಬೈ: ಯು.ಏ.ಇ. ಯ ಧ್ವನಿ ಪ್ರತಿಷ್ಠಾನ ದ ಮೂವತ್ತೈದನೇ ವಾರ್ಷಿಕೋತ್ಸವದ ಸಮಾರೋಪದ ಅಂಗವಾಗಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಅನಿವಾಸಿ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು ವಿಜೇತರ ವಿವರ ಹೀಗಿದೆ.
ಪ್ರಥಮ ಬಹುಮಾನ ಶ್ರೀ ಕನಕರಾಜ್ ಬಾಲಸುಬ್ರಮಣ್ಯಂ , ಸೌಧಿ ಅರೇಬಿಯ(ಕಥೆ: ಅಕಾಶ ಜಿಂಕೆ), ದ್ವಿತೀಯ ಡಾ. ಪ್ರೇಮಲತ ಬಿ, ಇಂಗ್ಲಂಡ್(ಕಥೆ: ತರ್ಕ) ಮತ್ತು ಶ್ರೀ ಇರ್ಶಾದ್ ಮೂಡುಬಿದಿರೆ, ದುಬಾಯಿ,( ಕಥೆ: ಅನಾಥ), ತೃತೀಯ/ಸಮಾಧಾನಕರ ಬಹುಮಾನ ಶ್ರೀಮತಿ ರಜನಿ ಭಟ್, ಅಬುದಾಭಿ, (ಕಥೆ: ತುಕ್ಕು ಹಿಡಿದ ಎಟಿಯಂ), ಡಾ. ಸವಿತಾ ನಟರಾಜ(ಬಸಾಪುರ), ಕುವೈಟ್(ಕಥೆ: ಮರಳುನಾಡಿನಲ್ಲೊಂದು ಮನೆಯ ಮಾಡಿ) ಮತ್ತು ಶ್ರೀಮತಿ ಯಶೋದಾ ಭಟ್. ದುಬಾಯಿ, (ಕಥೆ: ಸುಭದ್ರಾ). ಪ್ರಥಮ ಬಹುಮಾನ ರು.೧೦,೦೦೦/- ಮತ್ತು ಪ್ರಶಸ್ತಿ ಫಲಕ , ದ್ವಿತೀಯ ರೂ. ೫,೦೦೦/- ಮತ್ತು ಸಮಾಧಾನಕರ ರೂ. ೧,೫೦೦/- ನಗದು ಬಹುಮಾನವನ್ನು ನೀಡಲಾಗುವುದು.