ಐದು ಪಂಚ್ ಪದಿಗಳು (ಲಿಮರಿಕ್ಸ್)

ಕರು

————————————-

ಹಣ ಎಣಿಸುವ ಕರು ಬ್ಯಾಂಕರು

ನೀರುಣಿಸುವ ಕರು ಟ್ಯಾಂಕರು

ಸುದ್ದಿ ಎನ್ನುತ್ತ ಶುದ್ಧ 

ಸುಳ್ಳು ಬಿತ್ತುವ ಕರು

ನ್ಯೂಸ್ ಚಾನಲ್ಲಿನ ಅ್ಯಾಂಕರು!

ತಾತ

————————————-

ತಾತ ಹೋದರೆ ಪೇಟೆಗೆ

ತಂದೇ ತರುವರು ಆಟಿಗೆ

ಹತ್ತಿರ ಹೋದರೆ 

ಸೀನು ಬರುತ್ತದೆ

ತಾತನ ನಸ್ಯದ ಘಾಟಿಗೆ!

ಅದೇ ರೀತಿ

————————————-

ಹಂಸ ಪಕ್ಷಿ ಬಿಡುವುದು ನೀರನ್ನು

ಕುಡಿವುದಂತೆ ಬರೀ ಹಾಲನ್ನು

ಮಾನವರಲ್ಲೂ ಕೆಲವರು

ಬೇಡವೆನ್ನುವರು ನೀರು

ಕುಡಿಯುವಾಗ ಆಲ್ಕೊಹಾಲನ್ನು!

ಆಮೇಲೆ

————————————-

ಬಾಯ್ ಫ್ರೆಂಡ್ಸ್ ಜತೆ ಚಕ್ಕರು

ವೀಕೆಂಡ್ ಪಾರ್ಟಿ ಲಿಕ್ಕರು

ಮದುವೆಯಾದ ಮೇಲೆ

ಉರಿಯೋದಿಲ್ಲ  ಒಲೆ

ಕೂಗೋದೇ ಇಲ್ಲ ಕುಕ್ಕರು!

ರಕ್ಷಣೆ

————————————-

ರೆಪ್ಪೆಯ ರಕ್ಷಣೆ ಕಣ್ಣಿಗೆ

ಸಿಪ್ಪೆಯ ರಕ್ಷಣೆ ಹಣ್ಣಿಗೆ

ನೆಲದ ಫಲವತ್ತತೆ

ತೊಳೆದು ಹೋಗದಂತೆ

ವೃಕ್ಷದ ರಕ್ಷಣೆ ಮಣ್ಣಿಗೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter